ಮಂಗಳೂರು: ಬೆಸೆಂಟ್ ರಾಷ್ಟ್ರೀಯ ಪಿಯು ಕಾಲೇಜು ಪ್ರಾರಂಭ
ಮಂಗಳೂರು: ಮಂಗಳೂರಿನ ವುಮನ್ಸ್ ನ್ಯಾಷನಲ್ ಎಜುಕೇಶನ್ ಸೊಸೈಟಿ ಆಶ್ರಯದಲ್ಲಿ 2013-14ನೇ ಶೈಕ್ಷಣಿಕ ಸಾಲಿನಲ್ಲಿ ಬೆಸೆಂಟ್ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಪ್ರಾರಂಭವಾಗಲಿದೆ ಎಂದು ಸೊಸೈಟಿ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸೊಸೈಟಿ 7 ವಿದ್ಯಾಸಂಸ್ಥೆಗಳನ್ನು ಹೊಂದಿದೆ. ಇದುವರೆಗೆ ಬಾಲಕಿಯರ ಪಿಯು ಕಾಲೇಜು ಇದ್ದುದು ಇನ್ನು ಮುಂದೆ ಬಾಲಕರಿಗೂ ಪ್ರವೇಶಾವಕಾಶ ಸಿಗಲಿದೆ ಎಂದರು.
ಇಲ್ಲಿ 2 ವರ್ಷಗಳ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗ ಇರಲಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಕಡ್ಡಾಯವಾಗಿದೆ ಎಂದು ಹೇಳಿದರು.
10ನೇ ತರಗತಿಯಲ್ಲಿ ಶೇ.80 ಅಂಕ ಪಡೆದ ವಿದ್ಯಾರ್ಥಿಗೆ ಶುಲ್ಕದಲ್ಲಿ ರು. 2 ಸಾವಿರ ರಿಯಾಯ್ತಿ ಸಿಗಲಿದೆ. ಅಲ್ಲದೆ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೂ ಶುಲ್ಕದಲ್ಲಿ ವಿನಾಯ್ತಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸೊಸೈಟಿ ಉಪಾಧ್ಯಕ್ಷ ಮನೇಲ್ ಅಣ್ಣಪ್ಪ ನಾಯಕ್, ಪ್ರಾಂಶುಪಾಲೆ ಪರಮೇಶ್ವರಿ ಹಾಜರಿದ್ದರು.