ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಠಂದೂರು ಕುಟುಂಬದಲ್ಲಿ ರು. 1.26 ಕೋಟಿ ಮೌಲ್ಯದ ಆಸ್ತಿ

Lingaraj Badiger
Updated On : 20 Apr 2013, 11:38 am

ಪುತ್ತೂರು: ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಅವರ ಕುಟುಂಬ ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿದಂತೆ ಒಟ್ಟು ರು. 1.26 ಕೋಟಿ ಮೌಲ್ಯದ ಸೊತ್ತುಗಳನ್ನು ಹೊಂದಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕೈಯಲ್ಲಿ ರು. 16 ಸಾವಿರ ನಗದು ಹಣ, 10 ಗ್ರಾಂ ಚಿನ್ನ, ಪತ್ನಿಯ ಬಳಿ 10 ಸಾವಿರ ರೂಪಾಯಿ, ರು. 4,60 ಲಕ್ಷ ಮೌಲ್ಯದ 180 ಗ್ರಾಂ ಚಿನ್ನಾಭರಣ ಹಾಗೂ ಪುತ್ರಿಯ ಬಳಿ 40 ಗ್ರಾಂ ಚಿನ್ನಾಭರಣ ಇರುವುದಾಗಿ ಅವರು ಸಲ್ಲಿಸಿರುವ ಅಫಿದಾವಿತ್ನಲ್ಲಿ ತಿಳಿಸಿದ್ದಾರೆ.  ಸಂಜೀವ ಮಠಂದೂರು ಅವರು ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದಲ್ಲಿ  ಪಿತ್ರಾರ್ಜಿತ ಕೃಷಿ ಭೂಮಿ  ಹಾಗೂ ಸ್ವಯಾರ್ಜಿತ ಕೃಷಿಭೂಮಿ ಸೇರಿದಂತೆ  ಒಟ್ಟು  ರೂ. 40 ಲಕ್ಷ ಮೌಲ್ಯದ 4.73 ಎಕ್ರೆ ಆಸ್ತಿ ಹೊಂದಿದ್ದಾರೆ. ಅಲ್ಲದೆ ಕೃಷಿಯೇತರ ಭೂಮಿ, ವಸತಿ ಕಟ್ಟಡ ಸೇರಿ ಒಟ್ಟು 75 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ,ಒಂದು ಮಾರುತಿ ಓಮ್ನಿ ಕಾರು ಹೊಂದಿದ್ದಾರೆ. ವಿವಿಧ ಬ್ಯಾಂಕ್ಗಳಲ್ಲಿ ಸೇರಿ ಒಟ್ಟು 11.66 ಲಕ್ಷ ರುಪಾಯಿ ಸಾಲ. ಹಾಗೂ ಪುತ್ರಿಯ ಹೆಸರಲ್ಲಿ ಶಿಕ್ಷಣ ಸಾಲವಿದೆ ಎಂದು ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿರುವ ಅಫಿದಾವಿತ್ನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement