ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮತದಾರ ಜಾಗೃತಿ ಬೀದಿ ನಾಟಕ

Lingaraj Badiger
Updated On : 20 Apr 2013, 11:39 am

ಉಪ್ಪಿನಂಗಡಿ: ಪುತ್ತೂರು ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಕಡಬದ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಮತದಾರರ ಜಾಗೃತಿ ಆಂದೋಲನ ಜಾಥಾ ಬೀದಿ ನಾಟಕ ಶುಕ್ರವಾರ ಕಡಬದಲ್ಲಿ ನಡೆಯಿತು. ಕಡಬ ವಿಶೇಷ ತಹಸೀಲ್ದಾರ್ ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇ.ಧ. ಗ್ರಾ. ಯೋ, ಗ್ರಾ.ಪಂ. ಕಡಬ, ಲಯನ್ಸ್ ಮತ್ತು ಲಯನೆಸ್ ಕಡಬ, ಜೇಸಿಐ ಕಡಬ ಕದಂಬ, ಅಪ್ನಾ ದೇಶ್ ಸ್ವಯಂ ಸೇವಾ ಬಳಗಜವರು ಸಹಯೋಗ ನೀಡಿದರು. ಪುತ್ತೂರು ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳಿಂದ ಮತದಾನದ ಪ್ರಾಮುಖ್ಯತೆಯನ್ನು ನಿರೂಪಿಸುವ ರೂಪಕಗಳನ್ನು ಒಳಗೊಂಡ ಮತದಾರರ ಜಾಗೃತಿ ಬೀದಿ ನಾಟಕ ನಡೆಯಿತು.
--
ಇಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
ಬಂಟ್ವಾಳ: ಅಭಿರುಚಿ ಜೋಡುಮಾರ್ಗ ಸಾಹಿತ್ಯಕ, ಸಾಂಸ್ಕೃತಿಕ ವೇದಿಕೆ ವತಿಯಿಂದ ಶನಿವಾರ ಸಂಜೆ 6ರಿಂದ ಶ್ರೀ ಕೌಶಿಕ್ ಐತಾಳ್ ಅವರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಬಿ.ಸಿ. ರೋಡಿನ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಚಂದ್ರಮಾ ಕಲಾ ಮಂದಿರದಲ್ಲಿ ನಡೆಯಲಿದೆ. ಖ್ಯಾತ ಗಾಯಕ ಪಂಡಿತ್ ಪರಮೇಶ್ವರ ಹೆಗಡೆ ಅವರ ಶಿಷ್ಯರಾಗಿರುವ ಕೌಶಿಕ್ ಐತಾಳ್ ಪ್ರತಿಭಾನ್ವಿತ ಯುವ ಗಾಯಕರಾಗಿದ್ದು,  ಅಖಿಲ ಭಾರತ ಮಟ್ಟದ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಗುರುಪ್ರಸಾದ್ ಹೆಗ್ಡೆ ಹಾರ್ಮೋನಿಯಂ, ಭಾರವಿ ದೇರಾಜೆ ತಬಲದಲ್ಲಿ ಸಾಥ್ ನೀಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement