ಮೂಲ್ಕಿ: ಇಂದು, ನಾಳೆ ನೇಮೋತ್ಸವ
ಮೂಲ್ಕಿ: ಮೂಲ್ಕಿಯ ಚರಂತಿಪೇಟೆ ಕೋಟೆ ಕೊಪ್ಪಲ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ವರ್ಷಾವಧಿ ನೇಮೋತ್ಸವವು ಏ.20, 21ರಂದು ಜರುಗಲಿದೆ.
20ರಂದು ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಭಂಡಾರ ಇಳಿದು ಶ್ರೀ ಬಬ್ಬುಸ್ವಾಮಿ, ತನ್ನಿಮಾನಿಗ ದೈವಗಳ ನೇಮೋತ್ಸವ, 21ರ ಸಂಜೆ ಧೂಮಾವತಿ ಮತ್ತು ಬಂಟ ದೈವಗಳ ನೇಮೋತ್ಸವ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮಂಗಳೂರು: ನಾಳೆ 'ಬಿಟ್-ಮೊಕ್ ಸಿಇಟಿ'
ಮಂಗಳೂರು: ಬ್ಯಾರೀಸ್ ತಾಂತ್ರಿಕ ವಿದ್ಯಾಲಯದಲ್ಲಿ ಏ. 21 ರಂದು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ 'ಬಿಟ್-ಮೊಕ್ ಸಿಇಟಿ' ಮತ್ತು ಉದ್ಯೋಗ ಮಾಹಿತಿ ಕಾರ್ಯಾಗಾರ ನಡೆಯಲಿದೆ.
ಸ್ಪರ್ಧೆಯ ರ್ಯಾಂಕ್ ವಿಜೇತರಿಗೆ ಪ್ರಥಮ- ರು. 25ಸಾವಿರ, ದ್ವಿತೀಯ- 15ಸಾವಿರ, ರು. 10 ಸಾವಿರ ಮೌಲ್ಯದ ಆಕರ್ಷಕ ಬಹುಮಾನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ- 9900066888 ಸಂಪರ್ಕಿಸಬಹುದು.