ರು. 1.52 ಲಕ್ಷ ನಗದು ಸಹಿತ ಕಾರು, ಮೊಬೈಲ್ ವಶ
ವಿಟ್ಲ: ಚುನಾವಣಾ ಆಯೋಗದ ನಿಯಮಕ್ಕೆ ವಿರುದ್ಧವಾಗಿ ಕೇರಳದಿಂದ ಅಕ್ರಮವಾಗಿ ಹಣ ಸಾಗಾಟ ಮಾಡಿದ ಹಿನ್ನೆಲೆಯಲ್ಲಿ ಕಾರು, ಮೊಬೈಲ್, ನಗದು ಸಹಿತ ನಾಲ್ವರನ್ನು ಚುನಾವಣಾ ಆಯೋಗದ ಅಧಿಕಾರಿಗಳ ಬಂಧಿಸಿ, ಪ್ರಕರಣ ದಾಖಲಿಸಿದ ಘಟನೆ ಶುಕ್ರವಾರ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೇರಳದಿಂದ ಸಾರಡ್ಕ ಮಾರ್ಗವಾಗಿ ಕರ್ನಾಟಕಕ್ಕೆ ಬೆಳಗ್ಗೆ 11.45ಕ್ಕೆ ಕೇರಳ ರಿಜಿಸ್ಟ್ರೇಷನ್ ಹೊಂದಿರುವ ಕೆಎಲ್ 11 ಎಎಲ್ 2279 ಕಾರಿನಲ್ಲಿ ಸುಮಾರು ರು. 1.52 ಲಕ್ಷವನ್ನು ಹಣವನ್ನು ತರುತ್ತಿದ್ದ ಸಂದರ್ಭ ಚುನವಣಾ ಅಂಕಿ ಅಂಶ ಅಧಿಕಾರಿ ಶ್ವೇತಾ ಪತ್ತೆ ಹಚ್ಚಿದ್ದಾರೆ.
ಬಳಿಕ ಮೇಲಾಧಿಕಾರಿಯಾದ ಬಂಟ್ವಾಳ 205ನೇ ವಿಧಾನ ಸಭಾ ಕ್ಷೇತ್ರದ ಚುನಾವಣಾ ಸೆಕ್ಟರ್ ಮ್ಯಾಜಿಸ್ಟ್ರೇಟ್ 3 ವಿಜಯಕುಮಾರಿ ಶೆಣೈ ಅವರಿಗೆ ಮಾಹಿತಿ ನೀಡಿದ್ದಾರೆ.
ಅವರು ಬಂದು ತಪಾಸಣೆ ನಡೆಸಿದ ಸಂದರ್ಭ ಯಾವುದೇ ದಾಖಲೆಗಳು ಇಲ್ಲದ ಹಿನ್ನೆಲೆಯಲ್ಲಿ ಮಹಮ್ಮದ್ ಅಬ್ದುಲ್ ಹಾಸಿಫ್, ಹುಸೇನ್, ಮಹಮ್ಮದ್ ಸಂಸೀರ್, ಮಹಮ್ಮದ್ ಬಸೀರ್ ಅವರ ವಿರುದ್ಧ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಅವರನ್ನು ಬಂಧಿಸುವ ಜೊತೆಗೆ ಅವರಲ್ಲಿದ್ದ ಹಣ, 5 ಮೊಬೈಲ್ ಮತ್ತು ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.