ಶಕುಂತಳಾ ಶೆಟ್ಟಿ ಅವರಲ್ಲಿ ರು. 94.75 ಲಕ್ಷ ಮೌಲ್ಯದ ಆಸ್ತಿ
ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿ ಶಕುಂತಲಾ ಶೆಟ್ಟಿ ರು. 94.75 ಲಕ್ಷ ಮೌಲ್ಯದ ಆಸ್ತಿಯನ್ನು ಹೊಂದಿದ್ದು , ಕಳೆದ ಬಾರಿ ಸ್ವಾಭಿಮಾನಿ ವೇದಿಕೆಯ ವತಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಇದ್ದ ಸೊತ್ತುಗಳೇ ಈಗಲೂ ಇದೆ. 600 ಗ್ರಾಂ ಚಿನ್ನಾಭರಣ , ವಿವಿಧ ಉಳಿತಾಯ ಖಾತೆಗಳಲ್ಲಿರುವ ಉಳಿಕೆ, ನಿರಖು ಠೇವಣಿ , ಶೇರುಗಳು ಸೇರಿ ಒಟ್ಟು ರು. 32.37 ಲಕ್ಷದ ಚರಾಸ್ತಿ, ಕುಂತೂರಿನಲ್ಲಿ ಕೃಷಿ ಭೂಮಿ ಹಾಗೂ ಹಕ್ಕಿನ ಭೂಮಿ ಸೇರಿ ಒಟ್ಟು 2.02 ಎಕ್ರೆ ಆಸ್ತಿ, ಬೆಂಗಳೂರಿನಲ್ಲಿ ಡಿಎಚ್ಬಿಆರ್ ಲೇ ಔಟ್ನಲ್ಲಿ ಕೃಷಿಯೇತರ ಭೂಮಿ, ಮಂಗಳೂರಿನ ಮುನ್ನೂರು ಗ್ರಾಮದಲ್ಲಿ ವಸತಿ ಕಟ್ಟಡವಿದ್ದು, ಈ ಸ್ಥಿರಾಸ್ತಿಗಳ ಒಟ್ಟು ಮೌಲ್ಯ 94.75 ಲಕ್ಷ ರೂಪಾಯಿ ಎಂದು ನಾಮಪತ್ರ ಸಲ್ಲಿಕೆಯ ವೇಳೆ ಸಲ್ಲಿಸಿರುವ ದಾಖಲೆಗಳಿಂದ ತಿಳಿದು ಬಂದಿದೆ. ತೊಕ್ಕೊಟ್ಟು ಉಳ್ಳಾಲ ಕರ್ಣಾಟಕ ಬ್ಯಾಂಕ್ನಲ್ಲಿ ರು. 30 ಲಕ್ಷ ಸಾಲ ಇದೆ ಎಂದು ತಿಳಿಸಲಾಗಿದೆ.