ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಿಜೆಪಿಯದ್ದು ವಿನಾಶದ ಪ್ರಣಾಳಿಕೆ: ಪೂಜಾರಿ ಟೀಕೆ

Rashmi Kasaragodu
Updated On : 21 Apr 2013, 2:11 am

ಪುತ್ತೂರು: ರಾಜ್ಯ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿರುವ ಅರುಣ್ ಜೇಟ್ಲಿ ಅವರು ಇದು ವಿಕಾಸದ ಪ್ರಣಾಳಿಕೆಯಾಗಿದ್ದು, ಕರ್ನಾಟಕವನ್ನು ನಾವು ವಿಕಾಸಗೊಳಿಸುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ. ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದ ಇವರಿಗೆ ಈ ರೀತಿ ಹೇಳಲು ನಾಚಿಕೆಯಾಗಬೇಕು, ಇದು ವಿಕಾಸದ ಪ್ರಣಾಳಿಕೆ ಅಲ್ಲ. ಬದಲಾಗಿ ವಿನಾಶದ ಪ್ರಣಾಳಿಕೆ ಎಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಲೇವಡಿ ಮಾಡಿದರು.
ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮಗೆ ಕರ್ನಾಟಕದ ಜನತೆ ಮತ್ತು ನಾವು ಯಾವ ಸವಾಲು ಒಡ್ಡಿದ್ದೇವೆ. ನಿಮಗೆ ಸವಾಲು ಒಡ್ಡಿದವರು ಯಾರು?, ಹಗರಣ ಮತ್ತು ಭ್ರಷ್ಟಾಚಾರಗಳನ್ನು ನಡೆಸಿ ಜೈಲಿಗೆ ಹೋಗಲು ಹೇಳಿದವರು ಯಾರು ಎಂದು ಜೇಟ್ಲಿ ಅವರನ್ನು ಪ್ರಶ್ನಿಸಿದರು.
ರಾಜ್ಯದ 65 ವರ್ಷದ ಇತಿಹಾಸದಲ್ಲಿ ಯಾವೊಬ್ಬ ಮುಖ್ಯಮಂತ್ರಿಯೂ ಭ್ರಷ್ಟಾಚಾರ- ಹಗರಣ ನಡೆಸಿ ಜೈಲಿಗೆ ಹೋಗಿಲ್ಲ. ನೀವು ಆ ಕೆಲಸವನ್ನೂ ಮಾಡಿದ್ದೀರಿ. ಹೀಗಿದ್ದರೂ ಇದನ್ನು ತಡೆಗಟ್ಟುವ ಕೆಲಸವನ್ನು ನಿಮ್ಮ ಪಕ್ಷದ ಹೈಕಮಾಂಡ್ ಮಾಡಿಲ್ಲ. ಇದು ನಿಮ್ಮ ತತ್ವ ಸಿದ್ಧಾಂತವೇ ಎಂದು ಪೂಜಾರಿ ಪ್ರಶ್ನಿಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಕುಂತಳಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ಪಕ್ಷದ ಮುಖಂಡರಾದ ಎಚ್. ಮಹಮ್ಮದ್ ಆಲಿ ಮತ್ತಿತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement