ಮಂಗಳೂರು: ಇಂದು ವಿಶೇಷ ಸಭೆ
ಮಂಗಳೂರು:ಮೂಲಗೇಣಿ ಹೋರಾಟದ ಮುಂದಿನ ಹಂತದ ಬಗ್ಗೆ ಚರ್ಚಿಸಲು ಭಾನುವಾರ ಬೆಳಗ್ಗೆ 10ಕ್ಕೆ ನಗರದ ಡಾನ್ಬೋಸ್ಕೊ ಸಭಾಂಗಣದಲ್ಲಿ ವಿಶೇಷ ಸಭೆ ಕರೆಯಲಾಗಿದೆ ಎಂದು ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆ ಅಧ್ಯಕ್ಷ ಮ್ಯಾಕ್ಸಿಂ ಡಿಸಿಲ್ವ ುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 6 ವರ್ಷಗಳಿಂದ ಮೂಲಗೇಣಿ ಹಕ್ಕು ಆಗ್ರಹಿಸಿ ಹೋರಾಟ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಶಿಫಾರಸ್ಸು ಮೇರೆಗೆ ಮೂಲಗೇಣಿ ಹಕ್ಕಿಗೆ ರಾಷ್ಟ್ರಪತಿಗಳಿಂದ ಅಂಕಿತ ಸಿಕ್ಕಿತ್ತು. ರಾಜ್ಯಪತ್ರದಲ್ಲಿ ಪ್ರಕಟಣೆ ವೇಳೆ ಸ್ಥಾಪಿತಹಿತಾಸಕ್ತಿಗಳು ರಾಜ್ಯ ಸರ್ಕಾರ ವಿರುದ್ಧ ಹೈಕೋರ್ಟ್ನಲ್ಲಿ ರಿಟ್ ಸಲ್ಲಿಸಿದವು. ಈ ರಿಟ್ ವಿರುದ್ಧ ವೇದಿಕೆ ಹೋರಾಟ ನಡೆಸಬೇಕಾಗಿದ್ದು, ಈ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ ಎಂದರು. ಸದಸ್ಯರಾದ ಜೆರಾಲ್ಡ್ ಟವರ್, ಗೋಪಾಲಕೃಷ್ಣ, ರೊನಾಲ್ಡ್ ಡಿಸಿಲ್ವ ಇದ್ದರು.
ಇಂದು ರಕ್ತದಾನ ಶಿಬಿರ
ಬಂಟ್ವಾಳ: ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಮತ್ತು ಹೊಟೇಲ್ ರಂಗೋಲಿ ಆಶ್ರಯದಲ್ಲಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆ ಮತ್ತು ವೆನ್ಲಾಕ್ ಸರ್ಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ 59ನೇ ರಕ್ತದಾನ ಶಿಬಿರ ಭಾನುವಾರ ಬಿ.ಸಿ. ರೋಡಿನ ಹೊಟೇಲ್ ರಂಗೋಲಿಯಲ್ಲಿ ನಡೆಯಲಿದೆ. ನ್ಯಾಯವಾದಿ ಪ್ರಕಾಶ್ ನಾರಾಯಣ ರಕ್ತದಾನ ಮಾಡಿ ಶಿಬಿರ ಉದ್ಘಾಟಿಸಲಿರುವರು ಎಂದು ಸೇವಾಂಜಲಿ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ತಿಳಿಸಿದ್ದಾರೆ.
ಇಂದು 'ದಂಪತಿ ಸ್ಪರ್ಧೆ'
ಮಂಗಳೂರು: ಸಹಾಯ ಟಿ.ವಿ. ವತಿಯಿಂದ ಭಾನುವಾರ ಬೆಳಗ್ಗೆ 10ಕ್ಕೆ ಅತ್ತಾವರದ ಕುಶೆ ವಿದ್ಯಾಲಯ ಸಂಸ್ಥೆಯ ಸಭಾಂಗಣದಲ್ಲಿ ದಂಪತಿಗಳಿಗಾಗಿ 'ರಬ್ನೆ ಬನಾದಿ ಜೋಡಿ' ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆ ನಡೆಸಿ ವಿಜೇತ ದಂಪತಿಗೆ ರು. 5ಸಾವಿರ ನಗದು, ರು. 50 ಸಾವಿರ ಮೌಲ್ಯ ಬಹುಮಾನ ನೀಡಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9663384116 ಸಂಪರ್ಕಿಸಬಹುದು ಕಾರ್ಯಕ್ರಮದ ಆಯೋಜಕ ಹಿಸ್ರಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಇಂದು ಕಡವಿನ ರಾಜಂದೈವ ಕಲ್ಕುಡ ನೇಮೋತ್ಸವ
ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಉಪ್ಪಿನಂಗಡಿ ಕಡವಿನ ರಾಜಂದೈವ ಕಲ್ಕುಡ ನೇಮೋತ್ಸವವು ಭಾನುವಾರ ರಾತ್ರಿ ನಡೆಯಲಿದೆ. ರಾತ್ರಿ 8.30 ರ ವೇಳೆಗೆ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು, 9.00 ಗಂಟೆಯಿಂದ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಲಿದೆ ಎಂದು ಸಹಸ್ರಲಿಂಗೇಶ್ವರ ದೇವಾಲಯದ ಪ್ರಕಟಣೆ ತಿಳಿಸಿದೆ.