ಹಿರಿಯ ಯಕ್ಷಗಾನ ಕಲಾವಿದರ ಪರಿಸ್ಥಿತಿ ಸುಧಾರಿಸಿ: ಗಂಗಯ್ಯ ಶೆಟ್ಟಿ
ಕ.ಪ್ರ.ವಾರ್ತೆ , ಮಂಗಳೂರು , ಏ. 20
'ಯಕ್ಷಗಾನ ಹಿರಿಯ ಕಲಾವಿದರಪರಿಸ್ಥಿತಿ ಸುಧಾರಿಸಿದರೆ ಯಕ್ಷಗಾನದಅಭಿವೃದ್ಧಿ ಸಾಧ್ಯ' ಎಂದು ಶ್ರೀ ಕಟೀಲು ಯಕ್ಷಗಾನ ಬಯಲಾಟ ಮೇಳದ ಬಣ್ಣದ ವೇಷಧಾರಿ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಹೇಳಿದರು.
ಶನಿವಾರ ವಿಶ್ವವಿದ್ಯಾಲಯ ಮಂಗಳಾ ಸಭಾಂಗಣದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರ ವತಿಯಿಂದ ನೀಡಲಾಗುವ 'ಯಕ್ಷಮಂಗಳ' ಪ್ರಶಸ್ತಿಯನ್ನು ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ ಅವರಿಂದ ಸ್ವೀಕರಿಸಿ, ಕಲೆಗಾಗಿ ದುಡಿದ ಕಲಾವಿದರ ಪಾಡು ಯಾರು ಕೇಳುವವರಿಲ್ಲವಾಗಿದೆ. ತಾಯಿಯ ಮೃತದೇಹ ಸುಡುವ ಸಮಯದಲ್ಲಿಯೂ ಯಕ್ಷಗಾನದ ವೇಷ ಹಾಕುವ ಅನಿವಾರ್ಯವಿತ್ತು.
ಕಲೆಗಾಗಿ ದುಡಿದು ಸಾಧಿಸಿದ ಪರಿಣಾಮ ಸತ್ಪಲ ಸಿಕ್ಕಿದೆ. ಜನರು ಗುರುತಿಸುತ್ತಾರೆ ಎಂಬುದೇ ಖುಷಿ ಎಂದರು. ಕಲಾ ವಿಮರ್ಶಕ ಎ. ಈಶ್ವರಯ್ಯ ಮಾತನಾಡಿ, ಯಕ್ಷಗಾನ ಪ್ರಮಾಣ ಬದ್ಧ ಕಲೆ. ಕಲೆಗೆ ಹೊಸತನ ನೀಡುವ ಬಗೆಯನ್ನು ವಿಕಾಸದ ಮೂಲಕ ಬೆಳವಣಿಗೆ ಮಾಡಬೇಕೇ ಹೊರತು ಒಂದೇ ಸಲ ಹೇರಲ್ಪಟ್ಟರೆ ಅದನ್ನು ಪ್ರೇಕ್ಷಕ ಒಪ್ಪಿಕೊಳ್ಳುವುದಿಲ್ಲ ಎಂದರು.