ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿಮಾನ ಸೀಟಿನಡಿ ರು. 12.50 ಲಕ್ಷದ ಬಿಸ್ಕತ್ ಸಾಗಾಟ: ಮೂವರ ಸೆರೆ

Lingaraj Badiger
Updated On : 22 Apr 2013, 12:26 pm

ಮಂಗಳೂರು: ದುಬೈನಿಂದ ಮಂಗಳೂರು ಮೂಲಕ ಮುಂಬೈ ವಾಣಿಜ್ಯ ವಿಮಾನದಲ್ಲಿ ಅಕ್ರಮವಾಗಿ ಸೀಟಿನಡಿಯಲ್ಲಿ ಚಿನ್ನದ ಬಿಸ್ಕತ್ ಇರಿಸಿ ಸಾಗಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಭಾನುವಾರ ಪತ್ತೆ ಮಾಡಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದು, ರು. 12.50 ಲಕ್ಷ ಮೌಲ್ಯದ 5 ಬಿಸ್ಕತ್‌ಗಳನ್ನು ವಶಪಡಿಸಿದ್ದಾರೆ.
ಪ್ರಮುಖ ಆರೋಪಿ ಕೇರಳ ಕೋಡಿಕ್ಕೋಡ್‌ನ ಮಿತಲ ಕಲ್ಲುಲ ಪರಂಬತ್ ನಝೀರ್, ಸಹಚರ ಪೈವಳಿಕೆಯ ಅಹಮ್ಮದಾಲಿ ಮತ್ತು ಮುಂಬೈನ ಕುಂಞ ಅಬ್ದುಲ್ಲ.
 ದುಬೈನಿಂದ ಬೆಳಗ್ಗೆ 7.30ರ ವಿಮಾನದಲ್ಲಿ ಮಂಗಳೂರಿಗೆ ಬಂದ ನಝೀರ್, ಇಳಿಯುವುದಕ್ಕೂ ಮೊದಲು ತಾನು ಕುಳಿತಿದ್ದ ವಿಮಾನದ ಸೀಟಿನಡಿ ಗುಪ್ತವಾಗಿ 5 ಬಿಸ್ಕತ್ ಅಂಟಿಸಿದ್ದ. ಇದನ್ನು ಪಡೆಯಲು ಅಹಮ್ಮದಾಲಿ ನಝೀರ್ ಆಸನದಲ್ಲಿ ವಿಮಾನದಲ್ಲಿ ಮುಂಬೈಗೆ ಹೋಗಿದ್ದ. ಈ ಮಧ್ಯೆ ನಝೀರ್ ಕೃತ್ಯದ ಮಾಹಿತಿ ಪಡೆದ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಆತನನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಆ ವೇಳೆಗೆ ದುಬೈಗೆ ವಾಣಿಜ್ಯ ವಿಮಾನ ತೆರಳಿದ್ದರಿಂದ ಅಹಮ್ಮದಾಲಿ ಬಂಧನ ಸಾಧ್ಯವಾಗಲಿಲ್ಲ. ಕೂಡಲೇ ಮುಂಬೈ ಏರ್ ಇಂಟಲಿಜೆನ್ಸಿ ವಿಭಾಗಕ್ಕೆ ಮಾಹಿತಿ ರವಾನಿಸಿದರು. ಅಲ್ಲಿ ವಿಮಾನ ಇಳಿಯುತ್ತಿದ್ದಂತೆ ಅಹಮ್ಮದಾಲಿ,ಆತನ ಸಹಚರ ಕುಂಞಬ್ದುಲ್ಲನನ್ನು ಬಂಧಿಸಿದರು. ಈತನಿಂದ ತಲಾ 500 ಗ್ರಾಮ್‌ನ 5 ಚಿನ್ನದ ಬಿಸ್ಕತ್ ವಶಪಡಿಸಿಕೊಂಡರು. ಆರೋಪಿಗಳನ್ನು ಮಂಗಳೂರಿಗೆ ಕರೆತರಲಾಗುತ್ತಿದೆ.
ಸೀಟಿನಡಿ ಅಂಟಿಸಿ ತರುತ್ತಿದ್ದರು: ಆರೋಪಿಗಳು ಬಿಸ್ಕಟ್ ಸಾಗಾಟವನ್ನು ಕಳೆದ 1 ವರ್ಷದಿಂದ ಮಾಡುತ್ತಿದ್ದರು. ಒಬ್ಬ ಆರೋಪಿ ವಿಮಾನದಲ್ಲಿ ಆಗಮಿಸಿ ಚಿನ್ನದ ಬಿಸ್ಕತ್‌ನ್ನು ತರುವುದು. ಇಳಿಯುವಾಗ ಅದನ್ನು ತನ್ನ ಸೀಟಿನಡಿ ಅಂಟಿಸಿ ಇಡುವುದು. ಬಳಿಕ ಅದೇ ಸೀಟಿನಲ್ಲಿ ಆತನ ಸಹಚರ ಪ್ರಮಾಣಿಸುವುದು. ಆತನೂ ತನ್ನಲ್ಲಿರುವ ಬಿಸ್ಕತ್ ಸೀಟಿನ ಕೆಳಗೆ ಅಂಟಿಸಿಡುವುದು. ಇನ್ನೊಂದು ನಿಲ್ದಾಣದಲ್ಲಿ ಇನ್ನೊಬ್ಬ ಸಹಚರ ಇದೇ ಮಾದರಿಯಲ್ಲಿ ಬಿಸ್ಕತ್ ಸಾಗಾಟ ಮಾಡುವುದು ಇವರ ಜಾಲದ ಕೃತ್ಯ. ಹೀಗೆ ಪ್ರತಿ ಟ್ರಿಪ್‌ನಲ್ಲಿ ತಲಾ 500 ಗ್ರಾಮ್‌ನ 5 ಬಿಸ್ಕತ್ ಸಾಗಾಟ ಮಾಡುತ್ತಿದ್ದರು. ಮಂಗಳೂರಿನಿಂದ ಮುಂಬೈಗೆ ವಾಣಿಜ್ಯ ವಿಮಾನದಲ್ಲಿ ಸಂಚರಿಸುವುದರಿಂದ ಹೆಚ್ಚಿನ ತಪಾಸಣೆ ಇರುವುದಿಲ್ಲ. ಇದುವೇ ಅಕ್ರಮ ಬಿಸ್ಕತ್ ಸಾಗಾಟಕ್ಕೆ ಇವರಿಗೆ ವರದಾನವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement