3 ಕ್ಷೇತ್ರದಿಂದ ಜೆಡಿಯು ಸ್ಪರ್ಧೆ
ಮಂಗಳೂರು: ಸಂಯುಕ್ತ ಜನತಾದಳದಿಂದ ವಿಧಾನಸಭೆ ಚುನಾವಣೆಗೆ ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಹರೀಶ್ ಆಳ್ವ, ಮಂಗಳೂರಿನಿಂದ ಹಮೀದ್ ಉಳ್ಳಾಲ್, ಬೆಳ್ತಂಗಡಿಯಿಂದ ವೆಂಕಟೇಶ್ ಭಟ್ ಸ್ಪರ್ಧಿಸಲಿದ್ದಾರೆ.ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಚುನಾವಣೆಯಲ್ಲಿ ಇವುಗಳಿಗೆ ಸವಾಲೊಡ್ಡಿ, ನೈಜವಾದ ಪ್ರತಿಪಾದಿಸುವ ಪಕ್ಷವಾಗಿ ಸ್ಪರ್ಧಿಸಲಾಗುತ್ತಿದೆ. ಜೆಡಿಯು ಈಗಾಗಲೇ ಬಿಹಾರದಲ್ಲಿ 8ವರ್ಷಗಳಿಂದ ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ನೀಡಿದೆ. ಇದೇ ರೀತಿ ರಾಜ್ಯದಲ್ಲಿಯೂ ಉತ್ತಮ ಸರ್ಕಾರ ರೂಪುಗೊಳ್ಳಲು ಜೆಡಿಯು ಅಧಿಕಾರಕ್ಕೆ ಬರುವ ಅವಶ್ಯಕತೆಯಿದೆ ಎಂದು ಅಭ್ಯರ್ಥಿ ಹರೀಶ್ ಆಳ್ವ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಗೋಷ್ಠಿಯಲ್ಲಿ ಜೆಡಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶಾಂತ್ ಡಿಸೋಜ, ಮುಖಂಡರಾದ ಜೆ. ಡಿಸಿಲ್ವಾ, ಗ್ಲಾಟ್ಸನ್ ಇದ್ದರು.