ಕೆಜೆಪಿಯಿಂದ 65 ಮಂದಿ ರಾಜಿನಾಮೆ
ಮಂಗಳೂರು: ಕೆಜೆಪಿ ಪಕ್ಷವನ್ನು ವೈಯುಕ್ತಿಕ ಆಸ್ತಿಯನ್ನಾಗಿ ಮಾಡಿರುವ ಜಿಲ್ಲಾಧ್ಯಕ್ಷ ರವೀಂದ್ರ ಶೆಟ್ಟಿಯವರ ವರ್ತನೆಯನ್ನು ಖಂಡಿಸಿ ಪಕ್ಷದ 65 ಸದಸ್ಯರು ರಾಜೀನಾಮೆ ನೀಡಿ, ಪಕ್ಷೇತರ ಅಭ್ಯರ್ಥಿ ಜಪ್ಪು ಯೋಗೀಶ್ ಶೆಟ್ಟಿ ಅವರನ್ನು ಬೆಂಬಲಿಸುವುದಾಗಿ ಕೆಜೆಪಿಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಜೈನ್ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಜೆಪಿಯ ಮಂಗಳೂರು ಅಭ್ಯರ್ಥಿಯಾಗಿರುವ ರವೀಂದ್ರ ಶೆಟ್ಟಿ, ಕಾರ್ಯಕರ್ತರನ್ನು ಕಡೆಗಣಿಸಿ, ಪ್ರಮುಖರನ್ನು ಬದಿಗಿಟ್ಟು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬಿಜೆಪಿನಾಯಕರೊಂದಿಗೆ ಸಂಪರ್ಕವಿರುವ ಇವರು ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿರುವಂತೆ ಕಂಡು ಬರುತ್ತದೆ ಎಂದರು.
ಚುನಾವಣೆಗಾಗಿ ಪಕ್ಷದಿಂದ ಬರುವ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿ ದುರುಪಯೋಗ ಮಾಡುವ ಉದ್ದೇಶದಿಂದ ಕ್ಷೇತ್ರ ಸಮಿತಿ ಅಧ್ಯಕ್ಷ ಪದಾಧಿಕಾರಿಗಳನ್ನು ಕಾರ್ಯಕರ್ತರನ್ನು ದೂರವಿರಿಸಿದ್ದಾರೆ ಎಂಬ ಅನುಮಾನ. ಪಕ್ಷದ ರಾಜ್ಯ ಘಟಕಾಧ್ಯಕ್ಷ ಧನಂಜಯ್ಯ ಕುಮಾರ್ ಅವರಿಗೂ ಕಾರ್ಯಕರ್ತ ಮೇಲೆ ಕಳಕಳಿಯಿಲ್ಲ. ಆದ್ದರಿಂದ ಪಕ್ಷದದಿಂದ ತೊರೆದು ಪಕ್ಷೇತರ ಅಭ್ಯರ್ಥಿ ಯೋಗೀಶ್ ಶೆಟ್ಟಿ ಅವರನ್ನು ಬೆಂಬಲಿಸಲು ನಿರ್ಧರಿಸಿರುವುದಾಗಿ ಹೇಳಿದರು.
ಗೋಷ್ಠಿಯಲ್ಲಿ ಕೆಜೆಪಿ ಮಹಿಳಾ ಜಿಲ್ಲಾ ಕಾರ್ಯದರ್ಶಿ ವಿನುತಾ, ಪಕ್ಷೇತರ ಅಭ್ಯರ್ಥಿ ಯೋಗೀಶ್ ಶೆಟ್ಟಿ ಮತ್ತಿತರರು ಇದ್ದರು.