ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪೂಜಾರಿ ಹೇಳಿಕೆಗೆ ಬಿಜೆಪಿ ಖಂಡನೆ

Rashmi Kasaragodu
Updated On : 23 Apr 2013, 12:43 pm

ಮಂಗಳೂರು: 'ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಏ. 28 ರಂದು ಆಗಮಿಸುತ್ತಿರುವ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ತಾಕತ್ತಿದ್ದರೆ ತಡೆಯಲಿ' ಎಂದು ಜಿಲ್ಲಾ ಬಿಜೆಪಿ ಸವಾಲೆಸೆದಿದೆ. ಮೋದಿ ವಿರುದ್ಧ ಪೂಜಾರಿ ಅವರ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯರಾದ ಕೆ. ಮೋನಪ್ಪ ಭಂಡಾರಿ ಹಾಗೂ ಕ್ಯಾ. ಗಣೇಶ್ ಕಾರ್ಣಿಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೋದಿ ಅವರಿಗೆ ಕರ್ನಾಟಕಕ್ಕೆ ಬರಲು ಪೂಜಾರಿ ಅವರ ಆಹ್ವಾನ ಅಗತ್ಯವಿಲ್ಲ. ಮೋದಿ ಪ್ರಚಾರದಿಂದ ಮತದಾದರು ಬಿಜೆಪಿಯನ್ನು ಬೆಂಬಲಿಸಿ ಹೆಚ್ಚಿನ ಸೀಟು ಲಭಿಸಿ ಕಾಂಗ್ರೆಸ್ ಧೂಳಿಪಟವಾಗುವ ಆತಂಕ ಪೂಜಾರಿ ಅವರದ್ದು ಎಂದು ಹೇಳಿದರು.
ಪೂಜಾರಿ ಹೇಳಿಕೆಗೆ ಖಂಡನೆ: ಅಡ್ವಾಣಿ ವಿರುದ್ಧ ಪೂಜಾರಿ ನೀಡಿರುವ ಹೇಳಿಕೆಯು ಅವರ ಹಿಂದಿನ ಸೋಲಿನ ಅನುಭವದ ಪ್ರತಿಧ್ವನಿಯಂತಿದೆ. ಅಡ್ವಾಣಿ ಆಗಮನದಿಂದ ಬೆಚ್ಚಿರುವ ಅವರು ಮತದಾರರಿಂದ ಪ್ರಚಾರ ಗಿಟ್ಟಿಸಿಕೊಳ್ಳುವ ಸಲುವಾಗಿ ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ. ಅಡ್ವಾಣಿ ವಿರುದ್ಧ ಹೇಳಿಕೆ ಕೊಡುವ ಬದಲು ತಮ್ಮ ಹುಟ್ಟೂರಿನಲ್ಲಿ ಮತದಾರರು ಸೋಲಿನ ಕೂಪಕ್ಕೆ ತಳ್ಳಿರುವುದನ್ನು ಜ್ಞಾಪಿಸಿಕೊಳ್ಳಿ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಆಸ್ಕರ್ ವಿರುದ್ಧ ವಾಗ್ದಾಳಿ: 'ಅಡುಗೆ ಮನೆಗೆ ತೆರಳಿ ಮತ ಕೇಳಿ' ಎಂದಿರುವ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರು, ಕೇಂದ್ರ ಸರ್ಕಾರ ಗ್ಯಾಸ್ ಬಳಕೆಯಲ್ಲಿ ಕಡಿತ ಹಾಕಿರುವುದನ್ನು ತೆಗೆದು ಹಾಕಲಿ. ಇದರಿಂದ ಬೇಸತ್ತಿರುವ ಮಹಿಳಾ ಮತದಾರರು ಕಾಂಗ್ರೆಸ್ ವಿರೋಧಿಸಿ ಬಿಜೆಪಿ ಮತ ಹಾಕಲಿದ್ದಾರೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement