ಮಂಗಳೂರು: ನಾಳೆ ಲ್ಯಾಂಡ್ ಟ್ರೇಡ್ಸ್ ಅಟ್ಲಾಂಟಿಸ್ ವಸತಿ ಸಂಕೀರ್ಣಕ್ಕೆ ಶಂಕುಸ್ಥಾಪನೆ
ಮಂಗಳೂರು: ಲ್ಯಾಂಡ್ ಟ್ರೇಡ್ಸ್ ವಿನೂತನ ಅಟ್ಲಾಂಟಿಸ್ ವಸತಿ ಸಂಕೀರ್ಣಕ್ಕೆ ಏ.24ರಂದು ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಪಿ.ಜಯರಾಮ್ ಭಟ್ ಶಂಕುಸ್ಥಾಪನೆ ನೆರವೇರಿಸುವರು.
ಕಾರ್ಪೊರೇಶನ್ ಬ್ಯಾಂಕ್ ಉಪಮಹಾಪ್ರಬಂಧಕ ಎಂ.ಎ. ರಶೀದ್ ಮತ್ತು ಬೆಂದೂರು ವಾರ್ಡ್ ಕಾರ್ಪೊರೇಟರ್ ನವೀನ್ ಡಿಸೋಜ ಭಾಗವಹಿಸುವರು ಎಂದು ಲ್ಯಾಂಡ್ ಟ್ರೇಡ್ಸ್ ಆಡಳಿತ ನಿರ್ದೇಶಕ ಶ್ರೀನಾಥ್ ಹೆಬ್ಬಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
14 ಅಂತಸ್ತು, 40 ಐಷಾರಾಮಿ ಅಪಾರ್ಟ್ಮೆಂಟ್ಗಳಿರಲಿದ್ದು, ಅಪಾರ್ಟ್ಮೆಂಟ್ಗಳಲ್ಲಿ ಹೋಂ ಥಿಯೇಟರ್, ಸ್ಟಡಿ ರೂಮ್ ಸೌಲಭ್ಯವಿದೆ. ಪ್ರತಿ ಅಪಾರ್ಟ್ಮೆಂಟ್ಗಳಿಗೂ ವೇಗದ ಲಿಫ್ಟ್, ಕಂಟ್ರೋಲ್ ಕಾರ್ಡ್, ಟೆರೇಸ್ ಗಾರ್ಡನ್, ಹವಾನಿಯಂತ್ರಿತ ಅತ್ಯಾಧುನಿಕ ಜಿಮ್ ಸಹಿತ ಎಲ್ಲ ವ್ಯವಸ್ಥೆ ಇರಲಿದೆ. ಕ್ರಿಸೆಲ್ ಪ್ರಾದೇಶಿಕ ಪ್ರಬಂಧಕ ಅಜಯಕುಮಾರ್ ಆನಂದ್, ಕ್ರೆಡಾಯ್ ಕಾರ್ಯದರ್ಶಿ ಪುಷ್ಪರಾಜ್ ಜೈನ್, ಎಂಜಿನಿಯರ್ ಕೃಷ್ಣ ಶೆಟ್ಟಿ ಇದ್ದರು. ಈ ಸಂದರ್ಭ ಶ್ರೀನಾಥ್ ಹೆಬ್ಬಾರ್ಗೆ ಅಜಯ್ ಆನಂದ್ ಸ್ಟಾರ್ ಮೌಲ್ಯ ಪ್ರಮಾಣ ಪತ್ರ ಪ್ರದಾನ ಮಾಡಿದರು.
3 ಅಪಾರ್ಟ್ಮೆಂಟ್ಗೆ ಸ್ಟಾರ್ ರೇಟ್
ಆಂತಾರಾಷ್ಟ್ರೀಯ ಸಂಸ್ಥೆ ಕ್ರೆಸೆಲ್ ನೀಡುವ ಸ್ಟಾರ್ ರೇಟಿಂಗ್ ಲ್ಯಾಂಡ್ ಟ್ರೇಡ್ಸ್ ಸಂಸ್ಥೆ ನಿರ್ಮಿಸಿದ ಮೂರು ಕಟ್ಟಡಗಳಿಗೆ ಬಂದಿದೆ. ಈ ಮೂಲಕ ಸ್ಟಾರ್ ರೇಟಿಂಗ್ ಪಡೆದ ಮಂಗಳೂರಿನ ಮೊದಲ ಪ್ರತಿಷ್ಠಿತ ಬಿಲ್ಡರ್ ಸಂಸ್ಥೆಯಾಗಿ ಮೂಡಿ ಬಂದಿದೆ.
ಸಾಯಿ ಗ್ರಾಂಡ್ಯೂರ್ಗೆ 7 ಸ್ಟಾರ್, ಔರೇನಿಯಾ ಅಪಾರ್ಟ್ಮೆಂಟ್ಗೆ 7 ಸ್ಟಾರ್, ಕದ್ರಿ ಕಂಬಳ ಬಳಿಯ 333 ಪ್ಲ್ಯಾಟ್ ಸಮುಚ್ಚಯ ನಿರ್ಮಾಣ ಹಂತದಲ್ಲಿರುವ ಮೌರಿಷ್ಕಾ ಪ್ಯಾಲೇಸ್ಗೆ 5 ಸ್ಟಾರ್ ಲಭಿಸಿದೆ.