ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಂಹಿತೆ: ಕಾವೇರದ ಚುನಾವಣಾ ಬಿಸಿ

Rashmi Kasaragodu
Updated On : 23 Apr 2013, 12:39 pm

ಬೆಳ್ತಂಗಡಿ: ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಆದರೆ ಚುನಾವಣೆಯ ಬಿಸಿ ಇನ್ನೂ ಏರಿದಂತೆ ಕಂಡುಬರುತ್ತಿಲ್ಲ. ಉಮೇದುವಾರರು ಮತ್ತು ಅವರ ಬೆಂಬಲಿಗರು, ಕಾರ್ಯಕರ್ತರು ಪ್ರತಿ ಚುನಾವಣೆಯಂತೆ ಮನೆ ಮನೆಗೆ ತೆರಳಿ ಮತಯಾಚನೆಯಲ್ಲಿ ತೊಡಗಿದ್ದಾರೆ. ಆದರೆ ಮತದಾರ ಮಾತ್ರ ತಾನುಂಟು ತನ್ನ ಕೆಲಸವುಂಟು. ಯಾರು ಬಂದರೂ ಅಷ್ಟೆ ಎಂಬ ಭಾವದಲ್ಲಿದ್ದಾನೆ.
 ಈಗ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮದಿಂದಾಗಿ ಅಬ್ಬರದ ಪ್ರಚಾರ ಮಾಡುವಂತಿಲ್ಲ. ಅಲ್ಲದೆ ಖರ್ಚುವೆಚ್ಚಗಳ ಮಿತಿಯೂ ಇರುವುದಿರಂದ ಈ ಬಾರಿ ಅಭ್ಯರ್ಥಿಗಳು ಮನೆ ಮನೆ ಪ್ರಚಾರಕ್ಕೇ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.
 ಒಬ್ಬ ಅಭ್ಯರ್ಥಿಗೆ 16 ಲಕ್ಷ ಗರಿಷ್ಠ ವೆಚ್ಚ ಮಿತಿ ನೀಡಲಾಗಿದೆ. ಇದರಲ್ಲಿ ಪ್ರಚಾರ ವಾಹನ, ಅಭ್ಯರ್ಥಿ ಹಾಗೂ ಇತರರು ತೆರಳುವ ವಾಹನ, ಸಮಾವೇಶದ ಖರ್ಚು, ಆ ದಿನ ಊಟ, ತಿಂಡಿ ನೀಡಿದರೆ ಅದರ ಖರ್ಚು, ಜಾಹೀರಾತು, ಬ್ಯಾನರ್ ಇತ್ಯಾದಿಗಳ ಖರ್ಚು, ತಾರಾ ಪ್ರಚಾರಕರು ಆಗಮಿಸಿದರೆ ಅವರ ವಾಹನ, ಹೆಲಿಕಾಪ್ಟರ್ ಖರ್ಚು ಇತ್ಯಾದಿ ಅಭ್ಯರ್ಥಿಯ ಲೆಕ್ಕದಲ್ಲಿ ಇರುತ್ತದೆ. ಹಾಗಾಗಿ ಎಲ್ಲ ರಾಜಕೀಯ ಪಕ್ಷಗಳಿಗೆ ಹೊರಜಗತ್ತಿಗೆ ತಿಳಿಯದಂತೆ ದುಡ್ಡು ಖರ್ಚು ಮಾಡಿ ಚುನಾವಣೆ ಗೆಲ್ಲುವುದೇ ದೊಡ್ಡ ಸಾಧನೆ ಎಂಬಂತಾಗಿದೆ.
 ಬೆಳ್ತಂಗಡಿ ತಾಲೂಕಿನಲ್ಲಿ 232 ಬೂತ್‌ಗಳಿದ್ದು ಒಂದು ರಾಜಕೀಯ ಪಕ್ಷ ಪ್ರತಿ ಬೂತ್‌ಗೆ ಕನಿಷ್ಠ್ಠ 10 ಸಾವಿರದಂತೆ ಖರ್ಚು ಮಾಡಿದರೂ 23.2 ಲಕ್ಷವಾಗುತ್ತದೆ. ಇತರ ಸಮಾವೇಶ, ವಾಹನ, ಮೈಕ್, ಕರಪತ್ರ ಪ್ರತ್ಯೇಕ. ಕರಪತ್ರ ಮುದ್ರಿಸುವಾಗ ಪ್ರತಿಗಳು 1 ಸಾವಿರ ಎಂದು ತೋರಿಸಿ ಚುನಾವಣಾ ಆಯೋಗಕ್ಕೆ ಲೆಕ್ಕ ನೀಡಲಾಗುತ್ತದೆ. 1.89 ಲಕ್ಷ ಮತದಾರರು ಇರುವಾಗ ಮನೆಗೊಂದರಂತೆ ನೀಡಿದರೂ ಕನಿಷ್ಠ 50 ಸಾವಿರಕ್ಕಿಂತ ಹೆಚ್ಚು ಕರಪತ್ರ ಮುದ್ರಿಸಬೇಕಾಗುತ್ತದೆ. ಹಾಗಿರುವಾಗ ಯಾವ ಅಂಕಿ ಅಂಶವೂ ಚುನಾವಣಾ ಆಯೋಗದ ಅಂಕಿ ಅಂಶದ ಹತ್ತಿರವೂ ಸುಳಿಯದ ಕಾರಣ ಸುಳ್ಳು ಲೆಕ್ಕವೇ ಇಲ್ಲಿ ನಿಜವೆಂದು ಬಿಂಬಿತವಾಗುತ್ತದೆ. ಅಭ್ಯರ್ಥಿ ಘೋಷಿಸುವ ಆಸ್ತಿ ವಿವರವೂ ಅಷ್ಟೇ. ಕದ್ದು ಮುಚ್ಚಿ ಪಕ್ಕಾ ಲೆಕ್ಕಕ್ಕೆ ಸಿಗುವ ಆದಾಯವನ್ನು ಮಾತ್ರ ಅಭ್ಯರ್ಥಿ ತೋರಿಸುತ್ತಾನೆ. ಆತ ನಮೂದಿಸಿದ ಆಸ್ತಿಯ ಮೌಲ್ಯ ಸರ್ಕಾರಿ ಮೌಲ್ಯದ್ದಾಗಿರುತ್ತದೆ.
ಚುನಾವಣಾ ಆಯೋಗವೂ ಕೆಲವೆಡೆ ಅಗತ್ಯಕ್ಕಿಂತ ಹೆಚ್ಚು ಕಟ್ಟುಪಾಡು ಮಾಡಿದೆ ಎಂದು ರಾಜಕೀಯ ಪಕ್ಷಗಳು ಅಭಿಪ್ರಾಯ ಪಡುತ್ತಿವೆ. ಬಹಿರಂಗ ಸಮಾವೇಶ, ಬಹಿರಂಗ ಪ್ರಚಾರ ಇತ್ಯಾದಿಗೆ ಕಡಿವಾಣ ಹಾಕುವ ಮೂಲಕ ಮತದಾರರನ್ನು ತಲುಪಲು ಅವಕಾಶ ನೀಡಿಲ್ಲ.


ಕಟ್ಟುನಿಟ್ಟು..ಇಕ್ಕಟ್ಟು


ಟಿ ಈಗ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮದಿಂದಾಗಿ ಅಬ್ಬರದ ಪ್ರಚಾರ ಮಾಡುವಂತಿಲ್ಲ. ಅಲ್ಲದೆ ಖರ್ಚುವೆಚ್ಚಗಳ ಮಿತಿಯೂ ಇರುವುದಿರಂದ ಈ ಬಾರಿ ಅಭ್ಯರ್ಥಿಗಳು ಮನೆ ಮನೆ ಪ್ರಚಾರಕ್ಕೇ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.
ಟಿ ಬೆಳ್ತಂಗಡಿಯಲ್ಲಿ 232 ಬೂತ್‌ಗಳಿದ್ದು ಒಂದು ರಾಜಕೀಯ ಪಕ್ಷ ಪ್ರತಿ ಬೂತ್‌ಗೆ ಕನಿಷ್ಠ್ಠ 10 ಸಾವಿರದಂತೆ ಖರ್ಚು ಮಾಡಿದರೂ 23.2 ಲಕ್ಷವಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement