ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಳ್ಯದಲ್ಲಿ 1023 ಸಿಬ್ಬಂದಿ ನೇಮಕ

Rashmi Kasaragodu
Updated On : 23 Apr 2013, 12:43 pm

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣೆ ಸುಲಲಿತವಾಗಿ ನಡೆಸಿಕೊಂಡು ಹೋಗಲು ಚುನಾವಣಾ ಆಯೋಗ 1023 ಮಂದಿಯನ್ನು ನೇಮಿಸಿದೆ.
ಕ್ಷೇತ್ರದ 219 ಬೂತ್‌ಗಳಿಗೆ 240 ಮಂದಿ ಅಧ್ಯಕ್ಷಾಧಿಕಾರಿಗಳು, 240 ಮಂದಿ ಒಂದನೇ ಮತಗಟ್ಟೆ ಅಧಿಕಾರಿಗಳು ಹಾಗೂ ಉಳಿದ ಇತರ ಅಧಿಕಾರಿಗಳು ಸೇರಿ 1023 ಮಂದಿ ಇದ್ದಾರೆ. ಸೆಕ್ಟರ್ ಆಫೀಸರ್‌ಗಳು, ಸೆಕ್ಟರ್ ಮ್ಯಾಜಿಸ್ಟ್ರೇಟ್, ಸರ್ವೆಲೆನ್ಸ್ ಅಧಿಕಾರಿಗಳು ಹೀಗೆ ಸುಮಾರು 50 ಅಧಿಕಾರಿಗಳು ಲೆಕ್ಕದಿಂದ ಹೊರತಾಗಿದ್ದಾರೆ.
ಚುನಾವಣೆ ಭದ್ರತೆಗೆ ನೇಮಕಗೊಳ್ಳುವ ಪೋಲೀಸರು, ಗೃಹರಕ್ಷಕರು, ಮೀಸಲು ಪೊಲೀಸರು, ಅರೆಸೇನಾ ಪಡೆಯವರು ಈ ಲೆಕ್ಕದಲ್ಲಿ ಬರುವುದಿಲ್ಲ. ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಉತ್ತರ ಪ್ರದೇಶದ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಸಿಂಗ್ ಅಬ್ಸರ್ವರ್ ಆಗಿ ನೇಮಕಗೊಂಡಿದ್ದಾರೆ. ಒಂದು ಚುನಾವಣೆಗೆ ಬೂತ್ ಒಂದಕ್ಕೆ 12 ಸಾವಿರದಂತೆ ಸುಳ್ಯ ಕ್ಷೇತ್ರದ 219 ಬೂತ್‌ಗಳಿಗೆ ರು. 26,28,000 ಚುನಾವಣಾ ಆಯೋಗದಿಂದ ತಾಲೂಕು ಕಚೇರಿಗೆ ಬರುತ್ತದೆ.  ಈ ಬಾರಿ ಚುನಾವಣಾ ಘೋಷಣೆಯ ದಿನದಿಂದಲೇ ನೀತಿ ಸಂಹಿತೆ ಜಾರಿಗಾಗಿ ಸೆಕ್ಟರ್ ಅಧಿಕಾರಿಗಳ ಹಾಗೂ ಮ್ಯಾಜಿಸ್ಟ್ರೇಟ್‌ಗಳ ನೇಮಕವಾಗಿರುವುದರಿಂದ ಬೂತ್‌ವಾರು ಹಣ ಸುಮಾರು ರು. 15 ಸಾವಿರದಂತೆ ಸರ್ಕಾರದಿಂದ ಬರುವ ನಿರೀಕ್ಷೆಯಿದೆ. ಈ ಖರ್ಚಿನಲ್ಲಿ ಪೊಲೀಸರ ಭತ್ಯೆ ಸೇರುವುದಿಲ್ಲ.
24ರಂದು ತರಬೇತಿ
ಸುಳ್ಯ ವಿಧಾನಸಭಾ ಕ್ಷೇತ್ರದ ಎಲ್ಲಾ 219 ಬೂತ್‌ಗಳ ಅಧ್ಯಕ್ಷಾಧಿಕಾರಿಗಳು ಮತ್ತು 1ನೇ ಮತಗಟ್ಟೆ ಅಧಿಕಾರಿಗಳಿಗೆ 24ರಂದು ಬೆಳಗ್ಗೆ 9ರಿಂದ ಹಾಗೂ ಉಳಿದ ಅಧಿಕಾರಿಗಳಿಗೆ ಅಪರಾಹ್ನ 2ರಿಂದ ತರಬೇತಿ ಕಾರ್ಯಕ್ರಮವನ್ನು ಸುಳ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ. ಎಲ್ಲರಿಗೂ ತರಬೇತಿ ಕೇಂದ್ರದಲ್ಲಿಯೇ ಅಂಚೆ ಮತಪತ್ರ ವಿತರಿಸಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ. 24ರ ತರಬೇತಿಗೆ ಅನಿವಾರ್ಯ ಕಾರಣದಿಂದ ಬರಲು ಅಸಾಧ್ಯವಾಗುವವರಿಗೆ ತಾಲೂಕು ಕಚೇರಿಗೆ ಮೊದಲೇ ತಿಳಿಸಿದ್ದಲ್ಲಿ 25ರಂದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement