ಇಂದಿನಿಂದ ಅಭ್ಯರ್ಥಿಗಳ ಖರ್ಚು ವೆಚ್ಚ ಪರಿಶೀಲನೆ
ಮಂಗಳೂರು: ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೆಚ್ಚ ವೀಕ್ಷಕರಾಗಿ ವೀಕ್ಷಕರು, ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏ.24ರಿಂದ ಮೇ 3ರ ವರೆಗೆ ಚುನಾವಣೆಗೆ ಸ್ಪರ್ಧಿಸಿರುವ ಉಮೇದುವಾರರ ವೆಚ್ಚಗಳ ಪರಿಶೀಲನೆ ನಡೆಸುವರು.
ಬೆಳ್ತಂಗಡಿಯಲ್ಲಿ ವಿನೀಶ್ ಚೌಧುರಿ ಏ.24, 28 ಹಾಗೂ ಮೇ 2ರಂದು ಮಧ್ಯಾಹ್ನ 2ರಿಂದ 5ರ ವರೆಗೆ, ಮೂಡುಬಿದಿರೆಯಲ್ಲಿ ಇವರು ಇದೇ ದಿನಾಂಕದಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1, ಮೊಹಮ್ಮದ್ ಶಂಷದ್ ಆಲಂ ಏ.24, 28, ಮೇ 2ರಂದು ಮಂಗಳೂರು ಉತ್ತರದಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆ, ದಕ್ಷಿಣ ಕ್ಷೇತ್ರದಲ್ಲಿ ಏ.25, 29, ಮೇ.3ರಂದು ಬೆಳಗ್ಗೆ 10.30ರಿಂದ 1 ಗಂಟೆ ವರೆಗೆ ವೆಚ್ಚ ತಪಾಸಣೆ ನಡೆಸುವರು. ಮಂಗಳೂರು ಕ್ಷೇತ್ರದಲ್ಲಿ ಆರ್.ಆರ್.ಅಗರ್‌ವಾಲ್ ಏ.24, 28, ಮೇ 2ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ, ಬಂಟ್ವಾಳದಲ್ಲಿ ಇವರು ಏ.25, 29 ಮತ್ತು ಮೇ 3ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಪರಿಶೀಲನೆ ಮಾಡುವರು. ಪುತ್ತೂರಿನಲ್ಲಿ ವಿನೀಶ್ ಚೌಧುರಿ ಏ.25, 29, ಮೇ 3ರಂದು ಬೆಳಗ್ಗೆ 10ರಿಂದ 1ರ ವರೆಗೆ, ಸುಳ್ಯದಲ್ಲಿ ಏ.25, 29 ಮತ್ತು ಮೇ 3ರಂದು ಮಧ್ಯಾಹ್ನ 2ರಿಂದ ಸಂಜೆ 5ರ ವರೆಗೆ ತಪಾಸಣೆ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.