ಎನ್‌ಸಿಪಿಗೆ ಹಿರಿಯ ನಾಗರಿಕ, ಹಿಂದುಳಿದ ಸಂಘಟನೆ ಬೆಂಬಲ
ಮಂಗಳೂರು: ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ಎನ್‌ಸಿಪಿ ಅಭ್ಯರ್ಥಿ ಸುಪ್ರಿತ್ ಕುಮಾರ್‌ಗೆ ಹಿರಿಯ ನಾಗರಿಕರ ಮತ್ತು ಹಿಂದುಳಿದ ವರ್ಗದ ಸಂಘಟನೆ ಬೆಂಬಲ ನೀಡಲಿದೆ ಎಂದು ಅಧ್ಯಕ್ಷ ಕೆ.ಪಿ. ಪೂಜಾರಿ ತಿಳಿಸಿದ್ದಾರೆ. ಬಡವರ್ಗ ಮತ್ತು ಹಿರಿಯ ಸಮಸ್ಯೆಗಳ ಪರಿಹಾರಕ್ಕೆ ಎನ್‌ಸಿಪಿ ಬೆಂಬಲಿಸುತ್ತೇವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಳೆದ ವಿಧಾಸಭೆ ಚುನಾವಣೆಯಲ್ಲಿ ವಿಜಾಪುರದಲ್ಲಿ ಎನ್‌ಸಿಪಿ ಸ್ಪರ್ಧಿಸಿದೆ. ಆದರೆ ಠೇವಣಿ ಉಳಿಯಲಿಲ್ಲ. ಈ ಬಾರಿ ರಾಜ್ಯದಲ್ಲಿ 30 ಕಡೆ ಎನ್‌ಸಿಪಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದರು. ಎನ್‌ಸಿಪಿ ಅಧಿಕಾರಿಕ್ಕೆ ಬಂದರೆ ಬಡವರಿಗೆ ಕಿಲೊಗೆ 1 ದರದಲ್ಲಿ ಅಕ್ಕಿ, ಬಡವರಿಗೆ ಕನಿಷ್ಠ 1,200 ಚದರಡಿ ಮನೆ ನೀಡುವುದಾಗಿ ಅಭ್ಯರ್ಥಿ ಸುಪ್ರಿತ್ ಕುಮಾರ್ ಪೂಜಾರಿ ಹೇಳಿದರು. ಸಂಘಟನೆಯ ಮೇರಿ ಇದ್ದರು.