ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ದ.ಕ. ಜಿಲ್ಲೆ ಮತದಾರ ಸಂಖ್ಯೆ 15 ಲಕ್ಷಕ್ಕೆ ಏರಿಕೆ

Lingaraj Badiger
Updated On : 24 Apr 2013, 11:19 am

ಮಂಗಳೂರು: ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ ನಂತರ ಇದೀಗ ದ.ಕ.ಜಿಲ್ಲೆಯಲ್ಲಿ ಮೇ 5ರ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವವ ಮತದಾರರ ಸಂಖ್ಯೆ 15,00,385ಕ್ಕೆ ತಲಪಿದೆ.
ಜ.28ರ ವರೆಗೆ ಈ ಸಂಖ್ಯೆ 14,61,659 ಇತ್ತು, ಇದೀಗ 62,140 ಮಂದಿ ಸೇರ್ಪಡೆಯಾಗಿದ್ದಾರೆ. ಇದರಲ್ಲಿ 23,414 ಮತದಾರರರನ್ನು ಪಟ್ಟಿಯಿಂದ ಬಿಟ್ಟುಬಿಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಹರ್ಷಗುಪ್ತ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ತಂಗಡಿಯಲ್ಲಿ 193723, ಮೂಡುಬಿದಿರೆಯಲ್ಲಿ 173125, ಮಂಗಳೂರು ಉತ್ತರದಲ್ಲಿ 204290, ಮಂಗಳೂರು ದಕ್ಷಿಣ 204949, ಮಂಗಳೂರು 168266,ಬಂಟ್ವಾಳ 196944, ಪುತ್ತೂರು 179170, ಸುಳ್ಯ 179918 ಮತದಾರರಿದ್ದಾರೆ.
14,98,089 ಮಂದಿ ಭಾವಚಿತ್ರ: ಮತದಾರರ ಪಟ್ಟಿಗೆ ಸೇರ್ಪಡೆಯಾದವರ ಪೈಕಿ 14,98,089 ಮಂದಿಯ ಭಾವಚಿತ್ರ ಮತದಾರರ ಪಟ್ಟಿಯಲ್ಲಿ ಮುದ್ರಿಸಲಾಗಿದೆ. 2296 ಮಂದಿಯ ಭಾವಚಿತ್ರ ಮುದ್ರಣಕ್ಕೆ ಬಾಕಿ ಇದೆ. ಇದರಲ್ಲಿ ಶೇ.99.85 ಪ್ರಗತಿ ಸಾಧಿಸಲಾಗಿದೆ. ಬೆಳ್ತಂಗಡಿ 193719, ಮೂಡುಬಿದಿರೆ 173078, ಮಂಗಳೂರು ಉತ್ತರ 204242, ಮಂಗಳೂರು ದಕ್ಷಿಣ 203532, ಮಂಗಳೂರು 167586, ಬಂಟ್ವಾಳ 196883, ಪುತ್ತೂರು 179147, ಸುಳ್ಯ 179902 ಮಂದಿ ಮತದಾರರ ಭಾವಚಿತ್ರ ಮುದ್ರಿಸಲಾಗಿದೆ.
ಒಟ್ಟು 1715 ಮತಗಟ್ಟೆ: ಜಿಲ್ಲೆಯಲ್ಲಿ ಒಟ್ಟು 1657 ಮುಖ್ಯ , 88 ಅಕ್ಸಿಲರಿ(ಪೂರಕ) ಸೇರಿ ಒಟ್ಟು 1715 ಮತಗಟ್ಟೆಗಳಿವೆ. ಬೆಳ್ತಂಗಡಿ 254 ಮುಖ್ಯ 8 ಅಕ್ಸಿಲರಿ ಒಟ್ಟು 232, ಮೂಡುಬಿದಿರೆ 193 ಮುಖ್ಯ, 4 ಅಕ್ಸಿಲರಿ ಒಟ್ಟು 197, ಮಂಗಳೂರು ಉತ್ತರ 193 ಮುಖ್ಯ, 31 ಅಕ್ಸಿಲರಿ, ಒಟ್ಟು 222, ಮಂಗಳೂರು ದಕ್ಷಿಣ 198 ಮುಖ್ಯ, 10 ಅಕ್ಸಿಲರಿ, ಒಟ್ಟು 208, ಮಂಗಳೂರು 177 ಮುಖ್ಯ, 15 ಅಕ್ಸಿಲರಿ, ಒಟ್ಟು 192, ಬಂಟ್ವಾಳ 227 ಮುಖ್ಯ, 8 ಅಕ್ಸಿಲರಿ, ಒಟ್ಟು 210, ಸುಲ್ಯ 215 ಮುಖ್ಯ, 4 ಅಕ್ಸಿಲರಿ ಒಟ್ಟು 219 ಮತಗಟ್ಟೆಗಳಿವೆ. ಈ ಬಾರಿ ಸೂಕ್ಷ್ಮ, ಅತೀ ಸೂಕ್ಷ್ಮ ಎಂದು ಮತಗಟ್ಟೆ ವರ್ಗೀಕರಣವಿಲ್ಲ. ಅಂಥ ಮತಗಟ್ಟೆಗಳಿಗೆ ಭದ್ರತೆ ಸಹಿತ ಎಲ್ಲ ಏರ್ಪಾಡು ಮಾಡುವುದರಿಂದ ಈ ರೀತಿ ವರ್ಗೀಕರಣ ಮಾಡುವುದಿಲ್ಲ ಎಂದರು.
29ರಿಂದ ಸ್ಲಿಪ್ ವಿತರಣೆ: ಈ ಬಾರಿ ಚುನಾವಣೆಯಲ್ಲಿ ಮತದಾರರಿಗೆ ಆಯೋಗದಿಂದಲೇ ಮತದಾರರ ಚೀಟಿ ವಿತರಿಸಲಾಗುತ್ತಿದೆ. ಬೂತ್ ಮಟ್ಟದ ಅಧಿಕಾರಿ(ಬಿಎಲ್‌ಒ) ಇವುಗಳನ್ನು ವಿತರಿಸಲಿದ್ದು, ಪ್ರತಿ ಮನೆಗೂ ಭೇಟಿ ನೀಡಿ ಮತದಾರರಿಗೆ ಚೀಟಿ ವಿತರಿಸುತ್ತಾರೆ. ಮತದಾರರ ಚೀಟಿಯ 2 ಪ್ರತಿಯಲ್ಲಿ ಒಂದು ಪ್ರತಿಯನ್ನು ಮನೆ ಭೇಟಿ ವೇಳೆ ನೀಡಲಾಗುವುದು. ಮತದಾನಕ್ಕೆ ಬರುವಾಗ ಚೀಟಿ ತರದೇ ಇದ್ದಲ್ಲಿ ಮತದಾನ ಕೇಂದ್ರದಲ್ಲಿರುವ ಬಿಎಲ್‌ಒ ಇನ್ನೊಂದು ಪ್ರತಿಯನ್ನು ಮತದಾರನಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಮತದಾರರ ಸ್ಲಿಪ್‌ನಲ್ಲಿ ಭಾವಚಿತ್ರ ಇಲ್ಲದವರು ಆಯೋಗ ನಿಗದಿಪಡಿಸಿದ ಇತರೆ 23 ಭಾವಚಿತ್ರ ಇರುವ ಗುರಿತಿನ ಚೀಟಿ ಹಾಜರುಪಡಿಸಿ ಮತದಾನ ಮಾಡಬಹುದು. ಹೊಸದಾಗಿ ಎಪಿಕ್ ಕಾರ್ಡ್‌ನ್ನೂ ಇದೇ ವೇಳೆ ಮತದಾರಿಗೆಗೆ ನೀಡಲಾಗುವುದು ಎಂದರು.
ವಾಹನ ರಥಕ್ಕೆ ಅವಕಾಶವಿಲ್ಲ: ಚುನಾವಣಾ ಪ್ರಚಾರ ನಡೆಸುವ ಅಭ್ಯರ್ಥಿಗಳು ವಾಹನಕ್ಕೆ ಅನುಮತಿ ಪಡೆದು ಅದನ್ನು ವಾಹನದಲ್ಲಿ ಪ್ರದರ್ಶಿಸಬೇಕು. ಇದಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಯ ನಿರಕ್ಷೇಪಣಾ ಪತ್ರ ಬೇಕು. ಅನುಮತಿ ಪಡೆದ ವಾಹನದಲ್ಲಿ ಧ್ವನಿವರ್ಧಕಕ್ಕೆ ಅವಕಾಶವಿಲ್ಲ, ವಾಹನವನ್ನು ರಥವಾಗಿ ಬದಲಿಸಲು ಅವಕಾಶವಿಲ್ಲ. ಜಿಲ್ಲೆಯಲ್ಲಿ 91 ವಾಹನಗಳಿಗೆ ಪಾಸ್ ನೀಡಲಾಗಿದ್ದು, 76 ಸಭೆ, ಸಮಾರಂಭಗಳಿಗೆ ಅನುಮತಿ ಕೊಡಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಜಿಲ್ಲಾ ಮಟ್ಟದಲ್ಲಿ ಚುನಾವಣಾ ಪ್ರಚಾರ ಕಾರ್ಯ ಕೈಗೊಳ್ಳಲು ಒಂದು ಅನುಮತಿ ಪತ್ರ ಕೊಡಲಾಗಿದೆ.
ಮಾಧ್ಯಮ ದೂರು: ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗೆ ಸಂಬಂಧಿಸಿ ಅಭ್ಯರ್ಥಿಗೆ 7 ನೋಟೀಸ್ ಮತ್ತು ಚಾನೆಲ್‌ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರ ಕಾಗ್ರೆಸ್ ಅಭ್ಯರ್ಥಿಗೆ 3 ನೋಟಿಸ್, ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ, ಬಿಜೆಪಿ ಅಭ್ಯರ್ಥಿ, ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ಸೇರಿ ತಲಾ 1 ನೋಟಿಸ್ ನೀಡಲಾಗಿದೆ. ಮುದ್ರಣ ಮಾಧ್ಯಮದಲ್ಲಿ ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ, ಪುತ್ತೂರು ಬಿಜೆಪಿ ಅಭ್ಯರ್ಥಿ, ಮಂಗಳೂರು ದಕ್ಷಿಣ ಅಭ್ಯರ್ಥಿಗೆ ತಲಾ 1 ನೋಟಿಸ್ ನೀಡಲಾಗಿದೆ. ಈ ವರೆಗೆ ಸ್ವೀಕರಿಸಿದ ದೂರು 6. ಜಿಲ್ಲಾಧಿಕಾರಿಯ ನಿಯಂತ್ರಣ ಕೊಠಡಿಯ 1077ರಲ್ಲಿ ಈವರೆಗೆ 98 ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಾಗಿದೆ.
ಚುನಾವಣೆಗೆ 11 ಸಾವಿರ ಮಂದಿ: 8 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 1715 ಮತಗಟ್ಟೆ ಅಧಿಕಾರಿ ಸೇರಿದಂತೆ 11 ಸಾವಿರ ಮಂದಿಯನ್ನು ಬಳಸಿಕೊಳ್ಳಲಾಗುತ್ತದೆ. ಈ ಅಧಿಕಾರಿಗಳ ನೇಮಕಾತಿಯಲ್ಲಿ 4 ಹಂತದ ಪೂರ್ವಸಿದ್ಧತಾ ಕ್ರಮ ಕೈಗೊಳ್ಳಲಾಗುವುದು. ಏ.24 ಮತ್ತು 29ರಂದು 2 ಹಂತದ ತರಬೇತಿ ನಡೆಯಲಿದ್ದು, ಮತಗಟ್ಟೆ ಅಧಿಕಾರಿಗಳಿಗೆ, ಪೊಲೀಸ್ ಸಿಬ್ಬಂದಿಗಳಿಗೆ, ವಾಹನ ಸಿಬ್ಬಂದಿಗಳಿಗೆ ಅಂಚೆ ಮತಪತ್ರ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 8,500 ಮತಗಟ್ಟೆ ಅಧಿಕಾರಿಗಳು, 520 ವಾಹನ ಸಿಬ್ಬಂದಿ, 1,800 ಪೊಲೀಸ್ ಸಿಬ್ಬಂದಿಗೆ ಅಂಚೆ ಮತಪತ್ರ ಸಿದ್ಧಪಡಿಸಲಾಗಿದೆ ಎಂದರು.
ಚೆಕ್‌ಪೋಸ್ಟ್ ತಪಾಸಣೆ: ಅಧಿಕಾರಿಗಳ 3 ತಂಡ 24 ಗಂಟೆ ವಿಧಾನಸಭಾ ಕ್ಷೇತ್ರದ ಪ್ರಮುಖ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ಕೈಗೊಳ್ಳುತ್ತಿದ್ದು, ಹಣ, ಮದ್ಯ, ಆಯುಧ, ವಸ್ತುಗಳ ಅಕ್ರಮ ಸಾಗಾಟವನ್ನು ಪತ್ತೆಹಚ್ಚಿ ಮುಟ್ಟುಗೋಲು ಹಾಕುತ್ತಿದೆ. ಇದನ್ನು ವಿಡಿಯೋ ಚಿತ್ರೀಕರಣ ಮೂಲಕ ದಾಖಲಿಸಲಾಗುತ್ತಿದೆ.
ಶ್ಯಾಡೋ ವೆಚ್ಚ: ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಲ್ಲಿ ಅಳವಡಿಸಿರುವ ಪೀಠೋಪಕರಣ ಇತ್ಯಾದಿ ವೆಚ್ಚವನ್ನು ವಿಡಿಯೋ ಚಿತ್ರೀಕರಿಸಿ ವೆಚ್ಚ ನಿಯಂತ್ರಣ ತಂಡಕ್ಕೆ ರವಾನಿಸಲಾಗುವುದು. ಇದಕ್ಕಾಗಿ ಪ್ರತ್ಯೇಕ ತಂಡವಿದ್ದು, ಸಿಡಿ ನೋಡಿ ಅಂದಾಜು ದಾಖಲಿಸಲಿದೆ. ಇದನ್ನು ಅಭ್ಯರ್ಥಿವಾರು ಶ್ಯಾಡೋ ವೆಚ್ಚದಲ್ಲಿ ನಮೂದಿಸಲಾಗುವುದು. ಚುನಾವಣಾ ಖರ್ಚುವೆಚ್ಚಗಳ ವಿವರವನ್ನು ಅಭ್ಯರ್ಥಿ ಸಲ್ಲಿಸಿದಾಗ ಶ್ಯಾಡೋ ವಹಿಯಲ್ಲಿ ಹೋಲಿಸಿ ನೋಡಲಾಗುತ್ತದೆ. ಆಗ ಅಭ್ಯರ್ಥಿ ಆಕ್ಷೇಪಣೆ ಇದ್ದರೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೆ ಮೇಲ್ಮನವಿ ಸಲ್ಲಿಸಬಹುದು. ಸಕಾಲದಲ್ಲಿ ಖರ್ಚುವೆಚ್ಚದ ಲೆಕ್ಕ ಕೊಡದಿದ್ದರೆ ಅಂಥ ಅಭ್ಯರ್ಥಿಗೆ 6 ವರ್ಷ ಚುನಾವಣೆಗೆ ಸ್ಪರ್ಧಿಸಲು ನಿರ್ಬಂಧ ಹೇರುವಂಥ ಕ್ರಮ ಕೈಗೊಳ್ಳಲಾಗುವುದು ಎಂದರು. ಅಪರ ಜಿಲ್ಲಾಧಿಕಾರಿ ದಯಾನಂದ್, ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement