ಧರ್ಮಸ್ಥಳದಲ್ಲಿ ಮಹಾವೀರ ಜಯಂತಿ
ಮಂಗಳೂರು: ಧರ್ಮಸ್ಥಳ ಶ್ರೀಚಂದ್ರನಾಥ ಸ್ವಾಮಿ ಬಸದಿಯಲ್ಲಿ ಶ್ರೀ ಬಾಹುಬಲಿ ಸೇವಾ ಸಮಿತಿ ಅಂಗವಾಗಿ ಮಹಾವೀರ ಜಯಂತಿಯ ವಿವಿಧ ಕಾರ್ಯಕ್ರಮಗಳು ಡಾ. ವೀರೇಂದ್ರ ಹೆಗ್ಗಡೆ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆದವು.
ಮೊದಲು ಮೆರವಣಿಗೆ, ಬಾಲಕರಿಂದ ತೀರ್ಥಂಕರರಿಗೆ ಜನ್ಮಾಭಿಷೇಕ, ಬಾಲಕಿಯರಿಂದ ಅಷ್ಟವಿಧಾರ್ಚನೆ ಪೂಜೆ, ಮಕ್ಕಳಿಂದಲೇ ಭಜನೆ ನಡೆಯಿತು. ನಂತರ ನಾಮಕರಣ ಮಹೋತ್ಸವವನ್ನು ನೆರವೇರಿಸಲಾಯಿತು. ಮಹಾವೀರ ಸ್ವಾಮಿಯ ಸಂದೇಶವನ್ನು ಶುಭಚಂದ್ರರಾಜ್, ನಿರಂಜನ್, ಪುಷ್ಪದಂತ, ಸಾವಿತ್ರಿ ಪುಷ್ಪದಂತ ವಾಚಿಸಿದರು.