ರಾಜ್ಯದಲ್ಲೇ ಹೆಚ್ಚು ನಕಲಿ ಖಾತ್ರಿ
ನವದೆಹಲಿ: ಯುಪಿಎ ಸರ್ಕಾರದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ಎಂನರೇಗಾ) ಯೋಜನೆಯಲ್ಲಿ ಅತ್ಯಂತ ಹೆಚ್ಚು ಅಕ್ರಮ ನಡೆದದ್ದು ಕರ್ನಾಟಕದಲ್ಲಿ. ಇಂಥ ಒಂದು ಆಘಾತಕಾರಿ ಅಂಶ ಮಹಾಲೇಖಪಾಲರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಂಸತನಲ್ಲಿ ಮಂಡಿಸಲಾಗಿರುವ ವರದಿ ಪ್ರಕಾರ 2009-2012ರ ಅವಧಿಯಲ್ಲಿ ಎಂಟು ಜಿಲ್ಲೆಗಳ ವ್ಯಾಪ್ತಿಯಲ್ಲಿ 18 ವರ್ಷಕ್ಕಿಂತ ವಯಸ್ಸಿನ 262 ವ್ಯಕ್ತಿಗಳು ಯೋಜನೆಯಡಿ ಪ್ರಯೋಜನ ಪಡೆದುಕೊಂಡಿದ್ದಾರೆ. ಅವರಿಗೆ ರು. 3.62 ಲಕ್ಷ ವೇತನ ಪಾವತಿಸಲಾಗಿದೆ. ಇದರ ಜತೆಗೆ 90 ವರ್ಷ ವಯಸ್ಸಿನ 344 ಮಂದಿ ಪ್ರಯೋಜನ ಪಡೆದುಕೊಂಡಿದ್ದು, ರು. 3.65 ಲಕ್ಷ ವೇತನ ಪಾವತಿಸಲಾಗಿದೆ.
ಅಕ್ರಮ ನಡೆಸಿದ ಆರೋಪದ ಹಿನ್ನೆಲೆಯಲ್ಲಿ 2008-12ರ ಅವಧಿಯಲ್ಲಿ 98, 889 ಜಾಬ್ ಕಾರ್ಡ್‌ಗಳನ್ನು ಮತ್ತು 2,32,636 ಮಂದಿಯನ್ನು ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದೆ. ಅವರಿಗಾಗಿ ರು. 5.27 ಕೋಟಿ ಮೊತ್ತವನ್ನು ಸಂಬಳದ ರೂಪದಲ್ಲಿ ನೀಡಲಾಗಿದೆ ಎಂದು ಲೋಪವನ್ನು ಎತ್ತಿ ತೋರಿಸಲಾಗಿದೆ.
ಮಾಹಿತಿ ವ್ಯವಸ್ಥೆಯಲ್ಲಿನ 8 ಜಿಲ್ಲೆಗಳಲ್ಲಿ ಒಟ್ಟು 62.81 ನೋಂದಾಯಿತ ಫಲಾನುಭವಿಗಳ ಪೈಕಿ 19.67 ಲಕ್ಷ ಮಂದಿಯನ್ನು ಪಟ್ಟಿಯಿಂದ ಕೈಬಿಡಲು ಸಿದ್ಧತೆ ನಡೆಸಲಾಗಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.