ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಲೋಬೊ ಹಣ ನೀಡಿಲ್ಲ: ವಕೀಲ ಸ್ಪಷ್ಟನೆ

Lingaraj Badiger
Updated On : 24 Apr 2013, 11:20 am

ಮಂಗಳೂರು: ದಕ್ಷಿಣ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಸುದ್ದಿಗಾಗಿ ಕಾಸು ನೀಡಿದ್ದಾರೆ ಎಂದು ಆರೋಪಿಸಿ ಚುನಾವಣೆ ಅಧಿಕಾರಿ ನೋಟಿಸ್ ನೀಡಿದ ಬಗ್ಗೆ ಲೋಬೋ ಪರ ನ್ಯಾಯವಾದಿ ಸ್ಪಷ್ಟನೆ ನೀಡಿದ್ದಾರೆ.
ವಿ4 ನ್ಯೂಸ್‌ನಡಿ ರಾಜ್ಯ ಸಮರ ಟೈಟಲ್ ಅಡಿ ಪ್ರಸಾರಗೊಳ್ಳುವ ಚುನಾವಣೆ ಸುದ್ದಿಯಡಿ ಜೆ.ಆರ್.ಲೋಬೊ ಸಂದರ್ಶನ ಪ್ರಸಾರವಾಗಿದ್ದಕ್ಕೆ ನೋಟಿಸ್ ನೀಡಿದ್ದಾರೆ. ಇದೇ ಚಾನೆಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಯೋಗೀಶ್ ಭಟ್ ಸಂದರ್ಶನ ಕೂಡಾ ಪ್ರಸಾರವಾಗಿದೆ. ಲೋಬೋ ಯಾವುದೇ ಹಣ ಪಾವತಿಸಿಲ್ಲ. ಈ ಬಗ್ಗೆ ಚುನಾವಣೆ ಅಧಿಕಾರಿಗೆ ಲೋಬೊ ಸೂಕ್ತ ಉತ್ತರ ನೀಡಿದ್ದಾರೆ.  ಏ.22ರ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾದ ಜೆ.ಆರ್.ಲೋಬೊ ಮತಯಾಚಿಸುವ ಚಿತ್ರಕ್ಕೂ ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಿದ್ದಾರೆ. ಜೆ.ಆರ್.ಲೋಬೋ ದೇವಸ್ಥಾನಕ್ಕೆ ತೆರಳಿದಾಗ ಸಹಾಯ ಸುದ್ದಿ ವಾಹಿನಿಯವರು ಮಾತನಾಡಿಸಿದ್ದರು. ಇದನ್ನು ಕೂಡಾ ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಿ ನೋಟಿಸ್ ನೀಡಿದ್ದಾರೆ. ಇದಕ್ಕೂ ಸೂಕ್ತ ಉತ್ತರ ನೀಡಲಾಗಿದೆ ಎಂದು ನ್ಯಾಯವಾದಿ ಎಂ.ಪಿ.ನರೋನ್ಹಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement