45 ಪವನ್ ಚಿನ್ನಾಭರಣ, 3 ಲಕ್ಷ ನಗದು ಕಳವು
ಮಂಗಳೂರು: ಪಂಪ್‌ವೆಲ್ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಕಳ್ಳರು 45 ಪವನ್ ಚಿನ್ನಾಭರಣ, 3 ಲಕ್ಷ ನಗದು ಕಳವು ಮಾಡಿದ್ದಾರೆ. ಶಬಾನ ಅಯೂಬ್‌ಗೆ ಸೇರಿದ 301ನೇ ಮನೆ ಕೋಣೆಗೆ ಬಾಗಿಲು ಮುರಿದು ಒಳಹೊಕ್ಕಿದ ಕಳ್ಳರು ಚಿನ್ನಾಭರಣ ದೋಚಿದ್ದಾರೆ. ಶಬಾನ ಏ. 18ಕ್ಕೆ ಪ್ರವಾಸಕ್ಕೆ ತೆರಳಿದ್ದು, ತಂಗಿ ಪ್ರತಿ ದಿನ ಮನೆಗೆ ಬಂದು ಹೋಗುತ್ತಿದ್ದರು. ಆದರೆ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮನೆ ಬಾಗಿಲು ತೆರೆದ ಬಗ್ಗೆ ಶಬನಾಗೆ ಪಕ್ಕದ ಮನೆಯ ಅಯೀಶಾ ಕರೆ ಮಾಡಿ ತಿಳಿಸಿದ್ದರು.
ತಂಗಿ ಮನೆಗೆ ಬಂದು ನೋಡಿದಾಗ ಕಳವಾಗಿರುವುದು ಬೆಳಕಿಗೆ ಬಂತು. ಬೆಡ್‌ರೂಮ್ ಬಳಿ ಇರಿಸಿದ್ದ ಹಣ ಮತ್ತು ಚಿನ್ನಾಭರಣ ಕಳವಾಗಿತ್ತು. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.