ಉಪ್ಪಿನಂಗಡಿ: ಅನಿಲ ಟ್ಯಾಂಕರ್ ಪಲ್ಟಿ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಅನಿಲ ಸಾಗಣೆ ಟ್ಯಾಂಕರೊಂದು ಹೆದ್ದಾರಿ ಬದಿಗೆ ಮಗುಚಿ ಬಿದ್ದ ಘಟನೆ ಬುಧವಾರ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಖಾಲಿ ಟ್ಯಾಂಕರ್ ಚಾಲಕ ಮುರುಗೇಶ್ ಎಂಬಾತನ ನಿಯಂತ್ರಣಕ್ಕೆ ಸಿಲುಕದೇ ಬೆದ್ರೋಡಿ ತಿರುವಿನಲ್ಲಿ ಹೆದ್ದಾರಿ ಬದಿಗೆ ಮಗುಚಿ ಬಿತ್ತು.
ಘಟನೆಯಿಂದ ಯಾವುದೇ ಜೀವ ಹಾನಿಯುಂಟಾಗಿಲ್ಲ. ಹೆದ್ದಾರಿ ಬದಿಗೆ ಟ್ಯಾಂಕರ್ ಬಿದ್ದ ಪರಿಣಾಮ ಹೆದ್ದಾರಿ ಸಂಚಾರಕ್ಕೂ ಅಡೆತಡೆಯಾಗಿಲ್ಲ. ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.