ಕಾಂಗ್ರೆಸ್ ವಕೀಲರ ಸಭೆಯಲ್ಲಿ ಕೆಜೆಪಿ ನಾಯಕಿ ಪ್ರತ್ಯಕ್ಷ!
ಮಂಗಳೂರು: ನಗರದಲ್ಲಿ ನಡೆದ ವಕೀಲರ ಸ್ನೇಹ ಕೂಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ಪರ ವಕೀಲರು ಬೆಂಬಲ ಸೂಚಿಸಿದರು. ಕೆಜೆಪಿ ನಾಯಕಿ ಮರಿಯಮ್ಮ ಥಾಮಸ್ ಕಾಂಗ್ರೆಸ್ ವಕೀಲರ ಸಭೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.
ವಕೀಲ ಮನೋರಾಜ್ ಮಾತನಾಡಿ, ಜೆ.ಆರ್. ಲೋಬೋಗೆ ಬೆಂಬಲ ಸೂಚಿಸುತ್ತೇವೆ ಎಂದರು. ಕಾರ್ಪೊರೇಟರ್ ಎ.ಸಿ.ವಿನಯರಾಜ್, ಸೀತಾರಾಮ ಶೆಟ್ಟಿ, ಕಳ್ಳಿಗೆ ತಾರಾನಾಥ ಶೆಟ್ಟಿ ಸಹಿತ 75ಕ್ಕೂ ಹೆಚ್ಚು ಮಂದಿ ವಕೀಲರು ಭಾಗವಹಿಸಿದರು.
ಮಾಜಿ ಕಾರ್ಪೊರೇಟರ್ ಮರಿಯಮ್ಮ ಥಾಮಸ್ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕೆಜೆಪಿ ಸೇರಿದ್ದರು. ಕೆಜೆಪಿಯಲ್ಲಿ ಭಿನ್ನಮತದಿಂದ 65 ಮಂದಿ ಇತ್ತೀಚೆಗೆ ರಾಜಿನಾಮೆ ನೀಡಿದ್ದರು. ಇದೀಗ ಮರಿಯಮ್ಮ ಥಾಮಸ್ ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಂಡಿದ್ದಾರೆ.