ಮೇ 5ರಂದು ಸಾರ್ವತ್ರಿಕ ರಜೆ
ಮಂಗಳೂರು: ವಿಧಾನಸಭೆ ಚುನಾವಣೆ ಪ್ರಯುಕ್ತ ಎಲ್ಲ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಮೇ 5ರಂದು ರಾಜ್ಯದಲ್ಲಿನ ಎಲ್ಲ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳಲ್ಲಿ ಕಾಯಂ ಆಗಿ ಕಾರ್ಯನಿರ್ವಹಿಸುವ ನೌಕರರಿಗೆ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ ಆಕ್ಟ್ ಪ್ರಕಾರ ವೇತನ ಸಹಿತ ರಜೆ ನೀಡಲಾಗುವುದು ಎಂದು ಕೇಂದ್ರ ಚುನಾವಣೆ ಆಯೋಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದಿನಿಂದ ಉಚಿತ ತಪಾಸಣೆ
ಮಂಗಳೂರು: ಅತ್ತಾವರ ಕೆಎಂಸಿ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದಿಂದ ಏ. 25 ರಿಂದ 27ರವರೆಗೆ ಉಚಿತ ಶಸ್ತ್ರಚಿಕಿತ್ಸೆ ತಪಾಸಣೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಹೊಟ್ಟೆನೋವು, ಕಿಬ್ಬೊಟ್ಟೆ ನೋವು, ದೇಹದಲ್ಲಿ ಉಂಟಾಗುವ ಬಾವು, ಥೈರಾಯ್ಡಿ ಬಾವು ಇತ್ಯಾದಿ ಸಮಸ್ಯೆಗಳ ಕುರಿತು ತಪಾಸಣೆ ನಡೆಸಿ ಮಾಹಿತಿ ನೀಡಲಾಗುವುದು. ರೇಡಿಯೋಲಾಜಿ ಪರೀಕ್ಷೆಗೆ ಶೇ. 20 ಹಾಗೂ ಲ್ಯಾಬ್ ಪರೀಕ್ಷೆಯಲ್ಲಿ ಶೇ. 10 ರಿಯಾಯಿತಿ ದರ ನೀಡಲಾಗುತ್ತದೆ. ಸಾರ್ವಜನಿಕರು ಪ್ರಯೋಜನ ಪಡೆಯಬಹುದು ಎಂದು ವೈದ್ಯಕೀಯ ಮೇಲ್ವಿಚಾರಕ ಡಾ. ಮಧುಸೂದನ್ ಉಪಾದ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 1ರಂದು ತರಬೇತಿ
ಮಂಗಳೂರು: ಗೋಲ್ಡನ್ ಶಟಲ್ ಅಕಾಡೆಮಿ ವತಿಯಿಂದ ಮೇ 1 ರಿಂದ ಲಾಲ್‌ಬಾಗ್‌ನ ಯು.ಎಸ್. ಮಲ್ಯ ಇಂಡೋರ್ ಮೈದಾನದಲ್ಲಿ 'ಬ್ಯಾಡ್ಮಿಂಟನ್ ಬೇಸಿಗೆ ಶಿಬಿರ' ನಡೆಯಲಿದೆ. ಬ್ಯಾಡ್ಮಿಂಟನ್ ತರಬೇತಿಗಾಗಿ ಹೆಸರನ್ನು ನೋಂದಾಯಿಸಲು ತರಬೇತುದಾರ ಜ್ಞಾನೇಶ್- 9611412893 ಸಂಪರ್ಕಿಸಬಹುದು.
ರವಿಕಿರಣ್‌ಗೆ ಚಿನ್ನದ ಪದಕ
ಮಂಗಳೂರು: ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ರವಿಕಿರಣ್ ಪ್ರಭು 2010-12ನೇ ಸಾಲಿನ ಎಂ-ಟೆಕ್‌ನ ಕಂಪ್ಯೂಟೇಶನಲ್ ಅನಾಲಿಸಿಸ್ ಇನ್ ಮೆಡಿಕಲ್ ಸೈನ್ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿ, ಚಿನ್ನದ ಪದಕ ಪಡೆದಿದ್ದಾರೆ. ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರ್ ವಿಭಾಗದ ಎವಿತಾ ಸೆಲ್ಲೊ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ನೆಟ್‌ವರ್ಕ್ ಅಂಡ್ ಇಂಟರ್‌ನೆಟ್ ಎಂಜಿನಿಯರ್ ವಿಭಾಗದಲ್ಲಿ ಮಧು.ಬಿ 3ನೇ ರ್ಯಾಂಕ್ ಗಳಿಸಿದ್ದಾರೆ.