ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮೇ1ರಿಂದ ಕೊಂಕಣ ಹೊಸ ರೈಲು

Lingaraj Badiger
Updated On : 25 Apr 2013, 11:13 am

ಮಂಗಳೂರು: ಕೊಂಕಣ ಮಾರ್ಗದಲ್ಲಿ ಕೊಂಕಣ ರೇಲ್ವೆ ತಿರುನ್ವೇಲಿ-ದಾದರ್ ಮಧ್ಯೆ ಹೊಸ ಸಾಪ್ತಾಹಿಕ ರೈಲು ಸಂಚಾರ ಮೇ 1ರಿಂದ ಆರಂಭಿಸಲಿದೆ. ನಂ.22629/22630 ರೈಲು ಪ್ರತಿ ಬುಧವಾರ ತಿರುನ್ವೇಲಿ-ದಾದರ್ ಮಧ್ಯೆ ಹಾಗೂ ನಂ.22630/22629 ರೈಲು ಮೇ 3ರಿಂದ  ಶುಕ್ರವಾರ ದಾದರ್‌ನಿಂದ ಸಂಚರಿಸಲಿದೆ. ಥಾಣೆ, ಪನ್ವೇಲ್, ರೋಹಾ, ಚಿಪ್ಲೂನ್, ರತ್ನಗಿರಿ, ಕನಕವಲ್ಲಿ, ತಿವಿಮ್, ಮಡ್ಗಾಂವ್, ಕಾರವಾರ, ಹೊನ್ನಾವರ, ಉಡುಪಿ, ತೋಕೂರು, ಮಂಗಳೂರು ಜಂಕ್ಷನ್, ಕಣ್ಣೂರು, ಕೋಯಿಕ್ಕೋಡು, ಶೋರ್ನೂರು, ಪಾಲಕ್ಕಾಡ್, ಕೊಯಂಬತ್ತೂರು, ತ್ರಿಪುರಾ, ಈರೋಡ್, ದಿಂಡಿಗಲ್, ಮಧುರೈ, ವಿರುಧ್‌ನಗರ್ ಮತ್ತು ಕೊವಿಲ್‌ಪಟ್ಟಿ. 16 ಕೋಚ್ ಒಳಗೊಂಡಿದೆ.
ಎದೆನೋವಿನಿಂದ ಕುಸಿದು ವ್ಯಕ್ತಿ ಸಾವು
ಉಡುಪಿ: ಎದೆನೋವಿನಿಂದ ಕುಸಿದು ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬೊಮ್ಮರಬೆಟ್ಟು ಗ್ರಾಮದ ಮಂಜೊಟ್ಟಿ ಎಂಬಲ್ಲಿ ಮಂಗಳವಾರ ನಡೆದಿದೆ. ನಿಟ್ಟೂರಿನ ಅನುಗೃಹ ನಿಲಯದ ನಿವಾಸಿ ಜಯಕರ ಶೆಟ್ಟಿ (52) ಮೃತರು. ಇವರು ಬೊಮ್ಮರಬೆಟ್ಟು ಗ್ರಾಮದ ಮಂಜೊಟ್ಟಿ ಎಂಬಲ್ಲಿನ ಪ್ರದೀಪ ಶೆಟ್ಟಿ ಮನೆಯಲ್ಲಿ ದೈವದ ಕೆಲಸಕ್ಕೆ ಹೋದವರಿಗೆ ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದವರನ್ನು ಹಿರಿಯಡಕದ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆಗಾಗಿ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಜಯಕರ ಶೆಟ್ಟಿ ಅವರ ಮೃತದೇಹವನ್ನು ಉಡುಪಿ ಶವಾಗಾರದಲ್ಲಿರಿಸಲಾಗಿದೆ ಎಂಬುದಾಗಿ ಅಜಿತಿ ಜ.ೆ ಶೆಟ್ಟಿ ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಹಿಳೆ ನಾಪತ್ತೆ: ದೂರು
ಪಡುಬಿದ್ರಿ: ಇಲ್ಲಿನ ನಡ್ಸಾಲು ಗ್ರಾಮದ ಬಿತ್ಲು ಮನೆಯ ಮಹಿಳೆನಾಪತ್ತೆಯಾದ ಪ್ರಕರಣ ಶುಕ್ರವಾರ ವರದಿಯಾಗಿದೆ. ನಾಪತ್ತೆಯಾದವರು ಜಲಜ ಸೆಡ್ತಿ (65). ಇವರು ಯಾವುದೋ ಕಾರ್ಯ ನಿಮಿತ್ತ ಮನೆಯಿಂದ ಹೋರಗೆ ಹೋದವರು ಇದುವರೆಗೂ ವಾಪಾಸ್ಸು ಬಾರದೆ  ಕಾಣೆಯಾಗಿದ್ದಾರೆ ಎಂಬುದಾಗಿ ವಿಜಯ ಶೆಟ್ಟಿ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement