ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಯಡಿಯೂರಪ್ಪ ಸಾಧನೆಯೇ ಗೆಲವಿಗೆ ಪ್ರೇರಣೆ: ಜಯರಾಮ ಭಟ್

Lingaraj Badiger
Updated On : 25 Apr 2013, 11:17 am

ಪುತ್ತೂರು: ಯಡಿಯೂರಪ್ಪ ಮಾಡಿರುವ ಉತ್ತಮ ಕೆಲಸ ಕಾರ್ಯಗಳು ಹಾಗೂ ಪುತ್ತೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ತನ್ನ ಕನಸುಗಳನ್ನು ಮತದಾರರ ಮುಂದಿರಿಸಿ ಮತಯಾಚನೆ ನಡೆಸುತ್ತಿರುವುದಾಗಿ ಕೆಜೆಪಿ ಅಭ್ಯರ್ಥಿ ಜಯರಾಮ ಭಟ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1972ರಿಂದ ಈತನಕ ಪುತ್ತೂರು ಕ್ಷೇತ್ರದಲ್ಲಿ ಯಾವುದೇ ನಿರೀಕ್ಷಿತ ಅಭಿವೃದ್ಧಿಕಾರ್ಯಗಳು ನಡೆದಿಲ್ಲ, ಕ್ಷೇತ್ರದ ಅಭಿವೃದ್ಧಿ ಕುರಿತು ತನಗೆ ಹಲವಾರು ಕನಸುಗಳಿದ್ದು, ಈ ನಿಟ್ಟಿನಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸುತ್ತಿದ್ದೇನೆ ಎಂದು ಹೇಳಿದರು. ಬಿಜೆಪಿ ಮತ್ತು ಕಾಂಗ್ರೆಸ್ ಬಣ್ಣ ಬಣ್ಣದ ಕರ ಪತ್ರಗಳನ್ನು ಮುದ್ರಿಸಿ ಲಕ್ಷಾಂತರ ರು. ಖರ್ಚು ಮಾಡಿ ಜನರನ್ನು ಮರುಳುಗೊಳಿಸುತ್ತಿದೆ. ಅವರಿಗೆ ಕರಪತ್ರದ ಖರ್ಚಿನಲ್ಲಿ ಒಂದು ಗ್ರಾಮವನ್ನು ಅಭಿವೃದ್ಧಿಪಡಿಸಬಹುದು ಎಂದು ಸಲಹೆ ನೀಡಿದರು. ತನ್ನನ್ನು ಆಯ್ಕೆ ಮಾಡಿದಲ್ಲಿ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಲಾಗುವುದು. ಅಲ್ಲದೆ, ಪ್ರತಿ ಇಲಾಖೆಯಲ್ಲಿ ಸಿಸಿ ಟಿವಿ ಅಳವಡಿಸುವುದರೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವುದಾಗಿ ಜಯರಾಮ ಭಟ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಜೆಪಿ ತಾಲೂಕು ಅಧ್ಯಕ್ಷ ಕೃಷ್ಣ ನಾಯ್ಕ ತೆಂಕಿಲ ಇದ್ದರು.
ಕಾಂಗ್ರೆಸ್ ಜನರ ದಿಕ್ಕು ತಪ್ಪಿಸುತ್ತಿದೆ: ವಿನಯನೇತ್ರ
ಮಂಗಳೂರು: ಹಲವು ಯೋಜನೆಗಳು ಅನುಷ್ಠಾನಗೊಂಡಿದ್ದರು, ಪೂರ್ವಾಗ್ರಹ ಪೀಡಿತರಾದ ಕಾಂಗ್ರೆಸ್ ಸೋಲಿನ ಭೀತಿಯಿಂದ ಸುಳ್ಳು ಪ್ರಚಾರದಿಂದ ಬಡ ಜನರ ದಿಕ್ಕು ತಪ್ಪಿಸುತ್ತಿದೆ. ಆದರೆ ಈಗ ಜನರು ದ್ವಿಮುಖ ನೀತಿಯನ್ನು ಅರ್ಥೈಸಿದ್ದಾರೆ ಎಂದು ಪರಿಶಿಷ್ಟ ಮೋರ್ಚಾದ ಉಪಾಧ್ಯಕ್ಷ ವಿನಯನೇತ್ರರು ಹೇಳಿದ್ದಾರೆ. ಬುಧವಾರ ಬಿಜೆಪಿ ಕಚೇರಿಯಲ್ಲಿ ಪರಿಶಿಷ್ಟ ಜಾತಿಯ ಪ್ರಮುಖರ ಸಭೆಯಲ್ಲಿ ಮಾತನಾಡಿದರು.
ಪರಿಶಿಷ್ಟ ಜಾತಿಯ ಕಲಿಯುವ ಮಕ್ಕಳಿಗಾಗಿ ಬಿಜೆಪಿ ಸರ್ಕಾರ ವಿಶೇಷ ಕಾಳಜಿ ವಹಿಸಿದ್ದು, ಹತ್ತನೇ ತರಗತಿಯಿಂದ ಸ್ನಾತಕೋತ್ತರ ವಿದ್ಯಾಭ್ಯಾಸದವರೆಗೆ ಮಕ್ಕಳಿಗೆ ವಿಶೇಷ ಆರ್ಥಿಕ ಅನುದಾನವನ್ನು ಪಾಲಿಕೆ ಮುಖಾಂತರ ಮಾಡುತ್ತಿದೆ ಎಂದು ಮಾಜಿ ಮೇಯರ್ ಪ್ರವೀಣ್ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಪಾಲಿಕೆಯ ಒಟ್ಟು ಆದಾಯದಲ್ಲಿ ಕೇವಲ ಶೇ. 18 ಮೊತ್ತ ಪರಿಶಿಷ್ಟ ಜಾತಿಯವರಿಗೆ ವಿನಿಯೋಗಿಸಿದ್ದರು, ಆದರೆ ಬಿಜೆಪಿ ಸರ್ಕಾರ ಶೇ. 22.75 ಏರಿಸಿದೆ. ಇದರಿಂದಾಗಿ ಹಿಂದೆ ಮನೆ ಕಟ್ಟಲು ಸಿಕ್ಕುತ್ತಿದ್ದ ರು. 70 ಸಾವಿರದಲ್ಲಿ ರು. 1.50 ಲಕ್ಷ ಏರಿಸಿದೆ. ಇದು ಶಾಸಕ ಎನ್. ಯೋಗಿಶ್ ಭಟ್ ಪ್ರಯತ್ನ ಫಲವಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement