ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದಿನಿಂದ 'ಕ್ಯಾಪಿಕಾನ್ 2013'

Rashmi Kasaragodu
Updated On : 26 Apr 2013, 11:29 am

ಮಂಗಳೂರು: ಕೆಎಂಸಿ ವೈದ್ಯಕೀಯ ಕಾಲೇಜಿನ ಔಷಧ ವಿಭಾಗದ ವತಿಯಿಂದ 26 ರಿಂದ 28ರವರೆಗೆ ಟಿ.ಎಂ.ಎ. ಪೈ ಸಭಾಂಗಣದಲ್ಲಿ 'ಕ್ಯಾಪಿಕಾನ್-2013' ವಾರ್ಷಿಕ ಸಮ್ಮೇಳನ ನಡೆಯಲಿದೆ.
  26 ರಂದು ಸಮ್ಮೇಳನವನ್ನು ಲೇಡಿಹಿಲ್‌ನ ಮಹಿಳಾ ಕ್ಲಬ್‌ನಲ್ಲಿ ಮಣಿಪಾಲ ವಿಶ್ವವಿದ್ಯಾಲಯ ಸಹ ಕುಲಪತಿ ಡಾ.ಎಚ್.ಎಸ್. ಬಳ್ಳಾಲ್ ಉದ್ಘಾಟಿಸುವರು.
 ಕುಲಪತಿ ಡಾ.ಕೆ. ರಾಮ್ ನಾರಾಯಣ್, ಎಪಿಐ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಡಾ.ಎಂ. ಪ್ರೇಮ್‌ನಾಥ್ ಮತ್ತಿತರರು ಪಾಲ್ಗೊಳ್ಳುವರು ಎಂದು ಔಷಧ ವಿಭಾಗದ ಉಪನ್ಯಾಸಕ ಡಾ. ರಾಘವೇಂದ್ರ ಭಟ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಟಿಎಂಎ ಪೈ ಸಭಾಂಗಣದಲ್ಲಿ ನಡೆಯುವ ಸಮ್ಮೇಳನದಲ್ಲಿ ರಾಜ್ಯದಿಂದ 800 ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳುವರು. ಯುವ ವೈದ್ಯರು ವೈಜ್ಞಾನಿಕ ಸಂಶೋಧನಾ ಪತ್ರವನ್ನು ಮಂಡಿಸುವರು ಎಂದು ಹೇಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement