ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದಿನಿಂದ ನೇಮೋತ್ಸವ

Rashmi Kasaragodu
Updated On : 26 Apr 2013, 11:32 am

ಬೆಳ್ತಂಗಡಿ: ಮುಗ್ಗಗುತ್ತು ಕಟುಂಬಸ್ಥರ ಟ್ರಸ್ಟ್ ವತಿಯಿಂದ ಮುಗ್ಗಗುತ್ತಿನಲ್ಲಿ ಧರ್ಮ ನೇಮೋತ್ಸವ26ರಿಂದ 29ರವರೆಗೆ ನಡೆಯಲಿದೆ ಎಂದು ಉಪಾಧ್ಯಕ್ಷ ಭಗೀರಥ ಜಿ. ತಿಳಿಸಿದ್ದಾರೆ.  ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನಾ ಧಾರ್ಮಿಕ ವಿಧಿ- ವಿಧಾನಗಳು ನಡೆಯಲಿದ್ದು, 28ರಂದು ಧರ್ಮ ನೇಮೋತ್ಸವ ನಡೆಯಲಿದೆ. ಮಧ್ಯಾಹ್ನ ಧಾರ್ಮಿಕ ಸಭೆ ನಡೆಯಲಿದ್ದು,  ಬಲ್ಯೋಟ್ಟು ಕ್ಷೇತ್ರದ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವಿದ್ವಾಂಸ ಡಾ.ಕೆ. ಚಿನ್ನಪ್ಪ ಗೌಡ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದರು.


ರು. 8 ಲಕ್ಷ ವಶ, ದಾಖಲೆ ತೋರಿಸಿದ ಬಳಿಕ ವಾಪಸ್
ಮಂಗಳೂರು: ಮನೆ ಖರೀದಿಗೆಂದು ಹಣ ಒಯ್ಯುತ್ತಿದ್ದವರನ್ನು ತಡೆಗಟ್ಟಿದ ಪಾಂಡೇಶ್ವರ ಪೊಲೀಸರು, 8 ಲಕ್ಷ ವಶಕ್ಕೆ ತೆಗೆದುಕೊಂಡಿದ್ದು, ದಾಖಲೆ ತೋರಿಸಿದ ಬಳಿಕ ವಾಪಸ್ ನೀಡಿದ್ದಾರೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ 49 ಸಾವಿರಕ್ಕಿಂತ ಹೆಚ್ಚು ನಗದು ಹೊಂದಿದ್ದು, ದಾಖಲೆ ಇಲ್ಲದಿದ್ದರೆ ಮುಟ್ಟುಗೋಲು ಹಾಕಿಕೊಳ್ಳಬೇಕು. ಅದರಂತೆ ಪೊಲೀಸರು ಹಣ ಮುಟ್ಟುಗೋಲು ಹಾಕಿದ್ದು, ವಕೀಲರ ಜತೆ ಆಗಮಿಸಿದ ಹಣದ ವಾರಸುದಾರರು ದಾಖಲೆ ತೋರಿಸಿ ಹಣ ಪಡೆದುಕೊಂಡರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement