ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ತರಬೇತಿಗೆ ಗೈರಾದವರ ಮೇಲೆ ಶಿಸ್ತು ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

Rashmi Kasaragodu
Updated On : 26 Apr 2013, 11:27 am

ಉಡುಪಿ: ಜಿಲ್ಲೆಯ ಐದು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬುಧವಾರ ಜರುಗಿದ ಮತಗಟ್ಟೆ ಅಧಿಕಾರಿ ತರಬೇತಿಗೆ ಯಾವುದೇ ಕಾರಣಗಳನ್ನು ನೀಡದೇ ಗೈರು ಹಾಜರಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ತಿಳಿಸಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದ 19 ಮಂದಿ ಪಿಆರ್‌ಓ, 15 ಮಂದಿ ಎಪಿಆರ್‌ಓ, ಕಾಪು ವಿಧಾನಸಭಾ ಕ್ಷೇತ್ರದ 15 ಮಂದಿ ಪಿಆರ್‌ಓ, ಕುಂದಾಪುರ ವಿಧಾನಸಭಾ ಕ್ಷೇತ್ರದ 5 ಮಂದಿ ಪಿಆರ್‌ಓ, 24 ಎಪಿಆರ್‌ಓ, ಬೈಂದೂರು ಕ್ಷೇತ್ರದ 6 ಪಿಆರ್‌ಓ, 7 ಮಂದಿ ಎಪಿಆರ್‌ಓ, ಕಾರ್ಕಳ ವಿಧಾನಸಭಾ ಕ್ಷೇತ್ರದ 5 ಮಂದಿ ಪಿಆರ್‌ಓ, 2 ಮಂದಿ ಎಪಿಆರ್‌ಓಗಳು ಈ ತರಬೇತಿಗೆ ಗೈರು ಹಾಜರಾಗಿದ್ದರು. ಅವರ ಮೇಲೆ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 134 -ಎ-ರಂತೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement