ಮಂಗಳೂರಲ್ಲಿ ನಾಳೆ ಅರುಣ್ ಜೇಟ್ಲಿ ಉಪನ್ಯಾಸ
ಮಂಗಳೂರು: ರಾಜ್ಯ ಸಭಾ ವಿಪಕ್ಷ ನಾಯಕ ಅರುಣ್ ಜೋಟ್ಲಿ ಏ.27ರಂದು ಸಂಜೆ 6.30ಕ್ಕೆ ಮಂಗಳೂರು ಸಂಘನಿಕೇತನದಲ್ಲಿ ನಡೆಯುವ ಸಿಟಿಜನ್ ಕೌನ್ಸಿಲ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಚಾಲಕ ಎಂ.ಕೆ.ಸುವೃತ್ ಕುಮಾರ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಭಾರತ 2020 ಸಾಧ್ಯತೆ ಮತ್ತು ಸವಾಲುಗಳು' ವಿಷಯದ ಮೇಲೆ ಉಪನ್ಯಾಸ ನೀಡುವರು. ಒಂದು ಗಂಟೆ ಉಪನ್ಯಾಸ ಬಳಿಕ ಅರ್ಧ ಗಂಟೆ ಸಂವಾದ ನಡೆಸುವರು. ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಬ್ರಿಗೇಡಿಯರ್ ಪಿ.ಎನ್.ರೈ ಅತಿಥಿಯಾಗಿ ಆಗಮಿಸಲಿದ್ದು, ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್ ಅಧ್ಯಕ್ಷತೆ ವಹಿಸುವರು. ಸಿಟಿಜನ್ ಕೌನ್ಸಿಲ್ ಕಳೆದ 4 ವರ್ಷದಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಿಂತಕರ ಕಾರ್ಯಕ್ರಮ ನಡೆಸುತ್ತಿದೆ ಎಂದರು. ಅಧ್ಯಕ್ಷ ಭಾಸ್ಕರ ದೇವಸ್ಯ, ಸದಸ್ಯ ರವಿಚಂದ್ರ ಹಾಜರಿದ್ದರು.