ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅರೆಸೇನಾ ಪಡೆ ಯೋಧರಿಗೆ ಕನ್ನಡ ಕಲಿಕೆ

Vishwanath S
Updated On : 27 Apr 2013, 1:54 am

ಕ.ಪ್ರ. ವಾರ್ತೆ  ,  ಮಂಗಳೂರು  ,  ಏ.26
ಉತ್ತರ ಭಾರತದವರೇ ತುಂಬಿದ್ದ ಕೇಂದ್ರ ಅರೆ ಸೇನಾ ಪಡೆಗಳ ಸೈನಿಕರಿಗೆ ಈಗ ಕನ್ನಡ ಕಲಿಯುವ ಸಮಯ. ನಕ್ಸಲ್ ಪೀಡಿತ ಪ್ರದೇಶ ಸಹಿತ ಜಿಲ್ಲೆಯ ವಿವಿಧೆಡೆ ಅರೆ ಸೇನಾ ಪಡೆಗಳು ಕಾರ್ಯಾಚರಿಸುತ್ತವೆ. ಕಳೆದ ಬಾರಿ ಮತದಾರರ ನಡುವೆ ಸಂವಹನ ಕೊರತೆಯಿಂದಾಗಿ ಕೊಂಚ ಗಲಿಬಿಲಿ ಉಂಟಾಗಿತ್ತು. ಇದನ್ನು ನಿವಾರಿಸಲು ಜಿಲ್ಲಾ ಎಸ್‌ಪಿ ಅಭಿಷೇಕ್ ಗೋಯಲ್, ಅರೆ ಸೇನಾ ಪಡೆ ಸಿಬ್ಬಂದಿಗೆ ಅಗತ್ಯ ಇರುವ ಕನ್ನಡ ಶಬ್ದಗಳನ್ನು ಬೋಧಿಸುವ ತರಗತಿ ನಡೆಸುತ್ತಿದ್ದಾರೆ.
 ಹಿಂದಿ ಲಿಪಿಯಲ್ಲಿಯೇ ಕನ್ನಡ ಶಬ್ದಗಳನ್ನು ಫ್ಲೆಕ್ಸ್‌ನಲ್ಲಿ ಬರೆದು ಅದರ ಅರ್ಥ ಬೋಧಿಸುತ್ತಾರೆ. ಪಾನಿ ಮುಂದೆ ನೀರು ಎಂದು ಹಿಂದಿಯಲ್ಲಿಯೇ ಬರೆಯುತ್ತಾರೆ. ನಹಿ ಚಾಹಿಯೇ ಎಂದರೆ ಬೇಡಾ, ಸಾಲಾಗಿ ಬನ್ನಿ, ಮಾತನಾಡ ಬೇಡಿ, ದಾರಿ ಬಿಡಿ, ಮುಂದೆ ಹೋಗಿ, ಒಳಗೆ, 5 ಗಂಟೆಗೆ ಗೇಟ್ ಬಂದ್ ಆಗುತ್ತದೆ ಇತ್ಯಾದಿ ಶಬ್ದಗಳಿವೆ. ಚುನಾವಣೆ ವೇಳೆ, ಮತಗಟ್ಟೆಗಳ ಬಳಿ ಅರೆ ಸೇನಾಪಡೆ ಸಿಬ್ಬಂದಿ ಸ್ಥಳೀಯರ ಜತೆ ಸಂಭಾಷಿಸಲು ಅಗತ್ಯವಿದ್ದ 40 ಶಬ್ದಗಳನ್ನು ಮಾತ್ರ ಬೋಧಿಸಲಾಗುತ್ತಿದೆ.
 ಜಿಲ್ಲೆಯಲ್ಲಿ ತಂಗುವ ವೇಳೆ ನೆರವಾಗಬಹುದಾದ ಮಾಹಿತಿಗಳುಳ್ಳ ಕೈಪಿಡಿ ಕೂಡಾ ನೀಡಲಾಗಿದೆ. ಕಲಿಕೆಗೆ ಸುಲಭವಾಗಲು ವೀಡಿಯೋ ಸೀಡಿಗಳನ್ನು ಕೂಡ ತರಬೇತಿ ವೇಳೆ ತೋರಿಸುತ್ತಾರೆ. ಚೆನ್ನಾಗಿ ಹಿಂದಿ ತಿಳಿದಿರುವ 6 ಮಂದಿ ಕನ್ನಡಿಗ ಪೊಲೀಸರಿಗೆ ತರಬೇತಿ ನೀಡುವ ಹೊಣೆ ವಹಿಸಲಾಗಿದೆ.  'ನಮಗೆ ಯಾವುದೇ ರೀತಿಯ ತರಬೇತಿ ಸಿಕ್ಕಿರಲಿಲ್ಲ. ನಾವು ಬೆಳಗ್ಗೆ 6.30 ರಿಂದ 8.30ರ ವರೆಗೆ ಕನ್ನಡ ಶಿಕ್ಷಕರಿಂದ ಕನ್ನಡ ಕಲಿಯುತ್ತಿದ್ದೆವು. ಇವರಿಗೆ ಕನ್ನಡ ಕಲಿಯಲು ಅವಕಾಶವೇ ಇಲ್ಲ, ಅಗತ್ಯವೂ ಇಲ್ಲ ಎಂದು ಭಾವಿಸುತ್ತಾರೆ. ಆದ್ದರಿಂದ ಇಲ್ಲಿನ ಜನರಿಗೆ ಸಮಸ್ಯೆ ಆಗದಿರಲು ಅವರಿಗೆ ಕನ್ನಡ ಕಲಿಸುವ ಯೋಜನೆ ಹಾಕಿಕೊಂಡೆವು' ಎನ್ನುತ್ತಾರೆ ಎಸ್‌ಪಿ ಅಭಿಷೇಕ್ ಗೋಯಲ್.

-ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement