'ರೆಡ್ಡಿಗಳಿಂದ ದುಡ್ಡು ಪಡೆದಿಲ್ಲ'
ಕ.ಪ್ರ.ವಾರ್ತೆ , ಮಂಗಳೂರು , ಏ.26
ನಾನು ಬಳ್ಳಾರಿ ರೆಡ್ಡಿಗಳಿಂದ ಯಾವುದೇ ಹಣಕಾಸು ನೆರವು ಪಡೆದಿಲ್ಲ, ಅಥವಾ ದೇಣಿಗೆ ಸ್ವೀಕರಿಸಿಲ್ಲ. ಪ್ರತಿ ವರ್ಷ ವರಮಹಾಲಕ್ಷ್ಮಿ ಪೂಜೆಗೆ ಹೋಗುತ್ತಿದ್ದೆನೇ ವಿನಃ ಬೇರಾವುದೇ ವಿಷಯಕ್ಕಲ್ಲ. ಈ ಕುರಿತು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮಾಡಿದ ಆರೋಪದಲ್ಲಿ ಹುರುಳಿಲ್ಲ ಎಂದು ಲೋಕಸಭಾ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಮಂಗಳೂರಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಗೆ ಕಾಂಗ್ರೆಸ್ ನೇರ ಸ್ಪರ್ಧಿ ಎಂದರು.