ಒಮೇಗಾಕ್ಕೆ ಎನ್ಎಬಿಎಲ್ ಮಾನ್ಯತೆ
ಮಂಗಳೂರು: ಒಮೇಗಾ ಆಸ್ಪತ್ರೆಯ ಪ್ರಯೋಗಾಲಯ ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿದ್ದು, ದಿಲ್ಲಿಯ ಎನ್ಎಬಿಎಲ್ ಸಂಸ್ಥೆ ರಾಷ್ಟ್ರೀಯ ಮಾನ್ಯತೆ ನೀಡಿದೆ ಎಂದು ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಮುಕುಂದ್ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಆಸ್ಪತ್ರೆಯು ಲ್ಯಾಬೊರೇಟರಿ ಸರ್ವಿಸ್ನಲ್ಲಿ ಉತ್ತಮ ಗುಣಮಟ್ಟವನ್ನು ಕಾಪಾಡಿ, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಲಿದೆ.
ಲ್ಯಾಬೊರೇಟರಿ ಸರ್ವಿಸ್ನ ಮೆಶಿನ್ಗಳು ಅಂತಾರಾಷ್ಟ್ರೀಯ ಪ್ರಯೋಗಾಲಯ ಉತ್ಪಾದಿಸುವ ಸಂಸ್ಥೆಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಲಿದೆ. ಜಿಲ್ಲೆಯಲ್ಲಿ ಮಾನ್ಯತೆ ದೊರೆತಿರುವ ಪ್ರಥಮ ಆಸ್ಪತ್ರೆ ಒಮೇಗಾದ್ದಾಗಿದೆ ಎಂದರು. ಈ ಮಾನ್ಯತೆಯು ಆಸ್ಪತ್ರೆಯಲ್ಲಿ ನಡೆಯುವ ಹೃದಯ ಶಸ್ತ್ರಚಿಕಿತ್ಸೆ ಹಾಗೂ ಹೃದ್ರೋಗ ಚಿಕಿತ್ಸೆಗಳಿಗೆ ಹೊರರೋಗ ವಿಭಾಗದಲ್ಲಿರುವ ರೋಗಿಗಳ ಚಿಕಿತ್ಸೆಗೆ, ಸಾಮಾನ್ಯ ಶಸ್ತ್ರಚಿಕಿತ್ಸೆಗೆ ಸಹಕಾರಿಯಾಗಲಿದೆ ಎಂದು ಡಾ.ಎ.ಜಿ. ಜಯಕೃಷ್ಣನ್ ಹೇಳಿದ್ದಾರೆ.