ಕಟೀಲಿನಲ್ಲಿ ನಾಳೆ ಸಾಮೂಹಿಕ ವಿವಾಹ
ಮೂಲ್ಕಿ: ಕಟೀಲಿನ ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಲಕ್ಷ್ಮೀ ನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 29ರ ಸೋಮವಾರ ಸಂಜೆ ಗೋಧೂಳಿ ಕಟೀಲಿನ ಗೋಪಾಲಕ್ರಷ್ಣ ಆಸ್ರಣ್ಣ ಸಭಾಭವನದಲ್ಲಿ ಸಾಮೂಹಿಕ ವಿವಾಹ ಸಮಾರಂಭ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ. ಶೆಟ್ಟಿ ಉದ್ಘಾಟಿಲಿದ್ದು ಅಧ್ಯಕ್ಷತೆಯನ್ನು ಕಂಕನಾಡಿಯ ಮಹಾಲಿಂಗೇಶ್ವರ ದೇವಳದ ಸಮಿತಿಯ ಉಪಾಧ್ಯಕ್ಷ ಎ.ಕೃಷ್ಣಮೂರ್ತಿ ವಹಿಸಲಿದ್ದಾರೆ.
ಮುಂಬೈನ ಪೊವಾಯಿಯ ಮಹಾಶೇಷ ರುಂಡಮಾಲಿನಿ ಮಂದಿರದ ಧರ್ಮದರ್ಶಿ ಸುವರ್ಣ ಬಾಬಾ, ಶ್ರೀ ಕ್ಷೇತ್ರ ಕೊಡ್ಯಡ್ಕದ ಧರ್ಮದರ್ಶಿ ಕೊಡ್ಯಡ್ಕ ಜಯರಾಮ ಹೆಗ್ಡೆ, ಸಸಿಹಿತ್ಲು ಭಗವತಿ ದೇವಳದ ಧರ್ಮದರ್ಶಿ ಶ್ರೀನಿವಾಸ್ ಪೂಜಾರಿ, ಸಸಿಹಿತ್ಲು ಸಾರಂತಾಯ ಗರೋಡಿಯ ಆಡಳಿತ ಮೊಕ್ತೇಸರ ಕಾಂತು ಗುರಿಕಾರ, ಸಾಹಿತಿ ಕೆ.ಎಲ್. ಕುಂಡಂತಾಯ, ವಿಜಯಲಕ್ಷ್ಮೀ ಮತ್ತು ಕೇಶವ ಅಂಚನ್ ಮುಂಬೈ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕಿನ್ನಿಗೋಳಿ ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಮಂಗಳೂರಿನ ಉದ್ಯಮಿ ಧನಂಜಯ ಆಚಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.