ಫೇಸ್‌ಬುಕ್‌ನಲ್ಲಿ ಬಿಜೆಪಿ ಕಾರ್ಯಕರ್ತನ ನಕಲಿ ಐಡಿ ಸೃಷ್ಟಿ: ದೂರು
ಮಂಗಳೂರು: ಕೊಡಿಯಾಲ್‌ಬೈಲ್‌ನ ನಿವಾಸಿ ಬಿಜೆಪಿ ಕಾರ್ಯಕರ್ತ ಉಮೇಶ್ ಭಟ್ ಅವರ ಭಾವಚಿತ್ರ ಫೇಸ್‌ಬುಕ್‌ನಲ್ಲಿ ಬಳಸಿ, ನಕಲಿ ಐಡಿ ಸೃಷ್ಟಿಸಿ, ಕಾಂಗ್ರೆಸ್ ಪರ ಮತಯಾಚನೆ ಮಾಡಿದಂತೆ ಮಾಡಿದ ಚಿತ್ರಗಳನ್ನು ಹಾಕಿ ತೇಜೋವಧೆ ಮಾಡಲಾಗಿದ್ದು, ಇದು ವಿರೋಧ ಪಕ್ಷದ ಕೃತ್ಯ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಶನಿವಾರ ಫೇಸ್‌ಬುಕ್ ವೀಕ್ಷಿಸುತ್ತಿದ್ದ ಸಂದರ್ಭ ತನ್ನ ಫೋಟೋ ಹಾಕಿ ನಕಲಿ ಐಡಿ ತಯಾರು ಮಾಡಲಾಗಿದ್ದು, ಅದರಲ್ಲಿ ತಾನು ಕಾಂಗ್ರೆಸ್ ಪರ ಮತಯಾಚನೆ ಮಾಡಿದಂತೆ, ಅಲ್ಲದೆ ಅಶ್ಲೀಲ ಫೋಟೋಗಳ ದೃಶ್ಯಗಳನ್ನು ಹಾಕಲಾಗಿದೆ ಎಂದು ತಿಳಿಸಿದ್ದಾರೆ. ತನ್ನ ಜತೆಗೆ ಅಣ್ಣನಾದ ಶಾಸಕ ಯೋಗೀಶ್ ಭಟ್ ಅವರ ಭಾವಚಿತ್ರ ಹಾಕಿದ್ದು, ಬಿಜೆಪಿಯ ಘನತೆಯನ್ನು ಹಾಳುಮಾಡುವ ಕೃತ್ಯವಾಗಿದೆ. ಇದರ ಕುರಿತು ಸಮಗ್ರ ತನಿಖೆ ನಡೆಸುವಂತೆ ಬಂದರು ಠಾಣೆಯಲ್ಲಿ ದೂರು ನೀಡಿದ್ದಾರೆ.