ಮೇ 11 ಮತ್ತು 12 ರಂದು ಆಳ್ವಾಸ್ ಉದ್ಯೋಗ ಮೇಳ
ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಮೇ 11 ಮತ್ತು 12ರಂದು ಮೂಡುಬಿದಿರೆ ವಿದ್ಯಾಗಿರಿ ಆಳ್ವಾಸ್ ಪದವಿ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ ಆಳ್ವಾಸ್ ಪ್ರಗತಿ-2013 ನಡೆಯಲಿದೆ.
ಬುದ್ಧಿಯೊಂದಿಗೆ ಉದ್ಯೋಗವನ್ನು ನೀಡುವುದೇ ಆಳ್ವಾಸ್ ಶಿಕ್ಷಣ ಸಂಸ್ಥೆಯ ಉದ್ದೇಶ. ಇತ್ತೀಚೆಗೆ ಜಾಗತಿಕ ಆರ್ಥಿಕತೆ ಕುಸಿದ ಹಿನ್ನಲೆಯಲ್ಲಿ ಹಲವಾರು ಕಂಪನಿಗಳು ಉದ್ಯೋಗಾವಕಾಶಗಳನ್ನು ಖಡಿತಗೊಳಿಸಿದೆ. ಆದರೆ ಉತ್ತಮ ತರಬೇತಿ ಮತ್ತಿತರ ವಿಶೇಷ ಕೌಶಲ್ಯ ಹೊಂದಿರುವ ಅಕಾಂಕ್ಷಿಗಳಿಗೆ ಅವಕಾಶಗಳನ್ನು ಸಂಸ್ಥೆ ಒದಗಿಸಲಿದೆ ಎಂದು ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಬಾರಿ 150ಕ್ಕೂ ಅಧಿಕ ಕಂಪನಿಗಳು ಆಗಮಿಸಲಿವೆ. ಇದರಲ್ಲಿ ಐಟಿ, ಐಟಿಸ್, ಹಾಸ್ಪಿಟಾಲಿಟಿ, ಹೆಲ್ತ್‌ಕೇರ್, ಬಿಎಫ್‌ಎಸ್‌ಐ, ಮೀಡಿಯಾ, ಸೇಲ್ಸ್ ಮತ್ತು ರೀಟೆಲ್, ಬಿಪಿಒ, ಕೆಪಿಒ, ಎಚ್‌ಆರ್ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಆದ್ಯತೆ ನೀಡಲಾಗಿದೆ. ಟೈಟಾನ್, ವಿಡಿಯೋಕಾನ್, ಫೆಬ್‌ಟೆಕ್, ಆದಿತ್ಯ ಬಿರ್ಲಾಗ್ರೂಪ್, ಹನಿವೆಲ್, ಎಸ್ಸೆ, ಐಟಿಸಿ, ಐಬಿಎಂ, ಫೋರ್ಟಿಸ್, ಎಲ್ ಆ್ಯಂಡ್ ಟಿ, ತಾಜ್‌ಗ್ರೂಪ್, ಐಸಿಐಸಿಐ ಬ್ಯಾಂಕ್, ವಿಪ್ರೋ, ಟಿವಿಎಸ್, ಎಮ್‌ಫೆಸೈಸ್, ಟೆಫೆ, ಆಕ್ಸಿಸ್ ಬ್ಯಾಂಕ್, ಗೋಲ್ಡ್ ಫಿನ್ಚ್, ಯುಎಇ ಎಕ್ಸ್‌ಚೇಂಚ್ ಕಂಪನಿಗಳು ಪಾಲ್ಗೊಳ್ಳಲಿವೆ ಎಂದರು. ವಿದ್ಯಾರ್ಥಿಗಳು ತಮ್ಮ ನಿಖರ ವಿವರಗಳನ್ನು ಮುಂಗಡವಾಗಿ ಛಟಢಛಡಠ್ಠಛ್ಜಛಡ್ಝಿ2013ಅ್ಜಟಛ್ಝಟ.್ಛ್ಟಟ ಅಂತರ್ಜಾಲದಲ್ಲಿ ನೋಂದಾಯಿಸಿಕೊಳ್ಳಬಹುದು. ಉಚಿತ ಪ್ರವೇಶವಾಗಿದ್ದು, ದೂರದಿಂದ ಅಭ್ಯರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ರಾಜ್ಯದ ವಿವಿಧ ಕಾಲೇಜು ಮಂಡಳಿ, ಪ್ರಾಂಶುಪಾಲರು ತಮ್ಮ ವಿದ್ಯಾರ್ಥಿಗಳು ಮೇಳದಲ್ಲಿ ಪಾಲ್ಗೊಳ್ಳುವಂತೆ ಸಹಕರಿಸಬೇಕು ಎಂದು ಹೇಳಿದರು.
ವಿವರಗಳಿಗೆ ಸಂಪರ್ಕಿಸಿ: ಅಭ್ಯರ್ಥಿಗಳು ಸ್ವಪರಿಚಯ, ಅಂಕಪಟ್ಟಿಗಳ ಪ್ರತಿ, 10 ಭಾವಚಿತ್ರ ಹಾಗೂ ಇತರೆ ದಾಖಲೆಗಳ ವಿವರಗಳನ್ನು ತರಬೇಕು. ಮೇ 11 ರಂದು ಬೆಳಗ್ಗೆ 8.30ಕ್ಕೆ ಕಾಲೇಜಿನಲ್ಲಿ ಹಾಜರಿರಬೇಕು. ಮಾಹಿತಿಗಾಗಿ 08258-237104, 9844281138 ಸಂಪರ್ಕಿಸಬಹುದು.