ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರೈ ಆಸ್ತಿಯಲ್ಲಿ ಶೇ.2051 ಏರಿಕೆ ಆಗಿಲ್ಲ: ತಪ್ಪು ಲೆಕ್ಕ ನೀಡಿದ ಚು. ಆಯೋಗ

Mainashree
Updated On : 28 Apr 2013, 11:24 am

ಮಂಗಳೂರು: ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಅವರ ಆಸ್ತಿ ಕಳೆದ 5 ವರ್ಷಗಳಲ್ಲಿ ಸಾವಿರಾರು ಪಟ್ಟು ಏರಿಕೆಯಾಗಿದ್ದು ಚುನಾವಣೆ ಆಯೋಗದ ಸಿಬ್ಬಂದಿ ಅಚಾತುರ್ಯದಿಂದ!
 2008ರ ಚುನಾವಣೆಯಲ್ಲಿ ರಮಾನಾಥ ರೈ ಆಸ್ತಿ 1.64 ಕೋಟಿ ಘೋಷಿಸಿದ್ದರು. ಇದೇ ಕ್ಷೇತ್ರದಲ್ಲಿ ರಮಾನಾಥ ಪೈ ಎಂಬವರು ಸ್ಪರ್ಧಿಸಿದ್ದು ಅವರ ಆಸ್ತಿ 1.71 ಲಕ್ಷ.
 ಈ ಬಾರಿ ಪೈ ಕಣದಲ್ಲಿಲ್ಲ ಆದರೆ ಚುನಾವಣೆ ಆಯೋಗ ಪೈ ಆಸ್ತಿಯನ್ನು ರೈ ಹೆಸರಲ್ಲಿ ಪ್ರಕಟಿಸಿ ಅಚಾತುರ್ಯ ಮಾಡಿದೆ. ಒಂದೇ ಹೆಸರಿನಿಂದಾಗಿ ಈ ಅಚಾತುರ್ಯ ಸಂಬವಿಸಿದ್ದರೂ ರೈಗಳ ಇಮೇಜ್‌ಗೆ ಮಾತ್ರ ಇದು ಧಕ್ಕೆ ಮಾಡಿದೆ. ರಮಾನಾಥ ರೈ ಅವರ ಈ ಬಾರಿ ಆಸ್ತಿ 3.62 ಕೋಟಿ. ಸ್ಥಿರಾಸ್ತಿ 2008ರಲ್ಲಿ ಇದ್ದಷ್ಟೇ ಇದೆ.
ಆದರೆ ಭೂಮಿ ಮೌಲ್ಯ ಹೆಚ್ಚಳದಿಂದ ಆಸ್ತಿ ದ್ವಿಗುಣ ಗೊಂಡಂತೆ ಕಾಣುತ್ತದೆ ಎಂದು ರಮಾನಾಥ ರೈಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮರು ಆಯ್ಕೆ ಬಯಸಿದ 179 ಅಭ್ಯರ್ಥಿಗಳ ಪ್ರಮಾಣ ಪತ್ರ ಆಧರಿಸಿ ಪ್ರಜಾಸತ್ತೆ ಸುಧಾರಣೆ ಸಮಿತಿ ಮತ್ತು ಕರ್ನಾಟಕ ಚುನಾವಣೆ ಕಾವಲು ಸಮಿತಿ ಕಳೆದ ಬಾರಿ ಆಸ್ತಿಯೊಂದಿಗೆ ತುಲನೆ ಮಾಡಿದೆ. ಇವರು ಚುನಾವಣೆ ಆಯೋಗ ಪ್ರಕಟಿಸಿದ ವಿವರವನ್ನೇ ಅಧರಿಸಿದ್ದು, ರೈ ಆಸ್ತಿ ಶೇಕಡಾವಾರು 2051 ಏರಿಕೆಯಾಗಿದೆ ಎಂದು ವಿಶ್ಲೇಷಿಸಿದೆ.
ಆಯೋಗ ಸ್ಪಷ್ಟನೆ: ಈ ತಪ್ಪಿನ ಬಗ್ಗೆ ಮಹಮ್ಮದ್ ಬ್ಯಾರಿ ಚುನಾವಣೆ ಆಯೋಗದ ಗಮನ ಸೆಳೆದಿದ್ದರು. ಕರ್ತವ್ಯದಲ್ಲಿದ್ದ ರಿಟರ್ನಿಂಗ್ ಅಫೀಸರ್ ನಿರ್ಲಕ್ಷ್ಯದಿಂದ ಲೋಪ ಸಂಭವಿಸಿದೆ ಎಂದು ಚುನಾವಣೆ ಆಯೋಗ ಇಮೇಲ್ ಮೂಲಕ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement