ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಶಕುಂತಳಾ ವಿರುದ್ಧ ಕೀಳು ಮಟ್ಟದ ಅಪಪ್ರಚಾರ'

Lingaraj Badiger
Updated On : 29 Apr 2013, 11:54 am

ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಶೆಟ್ಟಿ ಬಗ್ಗೆ ಬಿಜೆಪಿ ಮತ್ತು ಎಸ್‌ಡಿಪಿಐ ಅಪಪ್ರಚಾರ ನಡೆಸುತ್ತಿದ್ದು, ವಾಮಮಾರ್ಗದ ಕೀಳು ಮಟ್ಟದ ರಾಜಕೀಯ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಎಚ್. ಮಹಮ್ಮದ್ ಆಲಿ ಆರೋಪಿಸಿದ್ದಾರೆ.
ಅವರು ಇತ್ತೀಚೆಗೆ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಆಭ್ಯರ್ಥಿ ಶಕುಂತಳಾ ಶೆಟ್ಟಿ ಅವರನ್ನು ಕೋಮುವಾದಿ, ಮುಸ್ಲಿಂ ವಿರೋಧಿ ಎಂದೆಲ್ಲಾ ಫೇಸ್‌ಬುಕ್ ಹಾಗೂ ಎಸ್‌ಎಂಎಸ್ ಮೂಲಕ ಬಿಜೆಪಿ ಮತ್ತು ಎಸ್‌ಡಿಪಿಐ ಪ್ರಚಾರ ನಡೆಸುತ್ತಿರುವುದು ಖಂಡನೀಯ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜಮಾರ್ಗದಲ್ಲಿ ಟೀಕೆ ಮಾಡುವುದು ಸಾಮಾನ್ಯ ಆದರೆ ವಾಮಮಾರ್ಗದಲ್ಲಿ ಸೋಲಿಸುವ ಕುತಂತ್ರ ನಡೆಸುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಎಂದು ಅವರು ಹೇಳಿದರು. ಶಕುಂತಳಾ ಶೆಟ್ಟಿ ಅವರು ಶಾಸಕರಾಗಿದ್ದ ಸಂದರ್ಭದಲ್ಲಿಯೂ ಯಾರನ್ನೂ ಕೋಮು ಭಾವನೆಯಿಂದ ನೋಡಿದವರಲ್ಲ. ಸಂಘ ಪರಿವಾರದ ಹಿನ್ನಲೆಯನ್ನು ಹೊಂದಿಲ್ಲದ ಅವರು ತನ್ನ ಜಾತ್ಯತೀತ ನಿಲುವಿನ ಕಾರಣದಿಂದಾಗಿ ಬಿಜೆಪಿಯಲ್ಲಿ ಹೆಚ್ಚು ಸಮಯ ಉಳಿಯಲು ಸಾಧ್ಯವಾಗಿಲ್ಲ. ಸಂಘ ಪರಿವಾರದ ಹಿನ್ನಲೆಯಿಲ್ಲದವರಿಗೆ ಬಿಜೆಪಿಯಲ್ಲಿ ಉಳಿಯುವುದು ಕಷ್ಟ. ಬಿಜೆಪಿ ಮುಖಂಡರ ಭ್ರಷ್ಟಾಚಾರವನ್ನು ಒಪ್ಪಲು ಸಾಧ್ಯವಾಗದೆ ಹೊರ ಬಂದಿರುವ ಜಾತ್ಯತೀತ ನಿಲುವಿನ ಶಕುಂತಳಾ ಶೆಟ್ಟಿ ಅವರ ಜನಪರ ಚಿಂತನೆಯನ್ನು ಪರಿಗಣಿಸಿ ಕಾಂಗ್ರೆಸ್ ಅವರಿಗೆ ಅವಕಾಶ ನೀಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಮುಖಂಡರಾದ ಬಿ.ಎ. ಶಕೂರ್ ಹಾಜಿ, ನ್ಯಾಯವಾದಿ ಫಝಲ್ ರಹೀಂ, ವಿ.ಕೆ. ಶರೀಫ್, ವಹಾಬ್ ತಂಙಳ್, ಇಸಾಕ್ ಸಾಲ್ಮರ ಉಪಸ್ಥಿತರಿದ್ದರು.

ಅನ್ಯಾಯ ಮಾಡಿದವರು ಯಾರು?: ಇಬ್ರಾಹಿಂ ಪ್ರಶ್ನೆ
ಪುತ್ತೂರು: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಕುಂತಲಾ ಶೆಟ್ಟಿ ಅವರಿಗೆ ಅನ್ಯಾಯವಾಗಿದೆ. ಇದಕ್ಕಾಗಿ ಅವರಿಗೆ ಮತ ಹಾಕಿ ಎಂದು ಮತದಾರರಿಗೆ ಕನಿಕರ ಬರುವ ರೀತಿಯಲ್ಲಿ ಕಾಂಗ್ರೆಸ್ ಮುಖಂಡರು ಹೇಳುತ್ತಾರೆ. ಆದರೆ ಶಕುಂತಲಾ ಶೆಟ್ಟಿ ಅವರಿಗೆ ಅನ್ಯಾಯ ಮಾಡಿದವರು ಯಾರು? ಎಂದು ಜೆಡಿಎಸ್ ವಿಧಾನಸಭಾ ಕ್ಷೇತ್ರದ ಕಾರ್ಯಾಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ಪ್ರಶ್ನಿಸಿದ್ದಾರೆ. ಉರಿಮಜಲು ಕಾರ್ಯಾಡಿಯಲ್ಲಿ ಮಹಮ್ಮದ್ ಎಂಬವರ ನಿವಾಸದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಕುಂತಳಾ ಶೆಟ್ಟಿ  ಬಿಜೆಪಿಯವರೇ ಹೊರತು ನೈಜ ಕಾಂಗ್ರೆಸಿಗರಲ್ಲ. ಕಾಂಗ್ರೆಸ್ ನೆಲ ಕಚ್ಚುವುದು ಖಂಡಿತ ಎಂದರು. ಪಕ್ಷದ ಲಕ್ಷ್ಮೀಶ ಗಬ್ಲಡ್ಕ ಮಾತನಾಡಿದರು. ಅಭ್ಯರ್ಥಿ ದಿನೇಶ್ ಬಿ.ಎನ್., ಪ್ರಧಾನ ಕಾರ್ಯದರ್ಶಿ ಎಸ್. ಅಬುಬಕ್ಕರ್ ಆರ್ಲಪದವು ಮಾತನಾಡಿದರು. ಕಾರ್ಯಾಡಿ ಹಯಾತುಲ್ ಇಸ್ಲಾಂ ಮದ್ರಸ ಗೌರವಾಧ್ಯಕ್ಷ ಕೆ.ಬಿ. ಮಹಮ್ಮದ್ ಮುಸ್ಲಿಯಾರ್ ಅಳಕೆಮಜಲು, ಕಾರ್ಯದರ್ಶಿ ಅಶ್ರಫ್ ಕೆ.ಜಿ.ಎನ್. ಪ್ರಮುಖರಾದ ಜನಾರ್ದನ ಗೌಡ, ಇಲ್ಯಾಸ್, ಅಬ್ದುಲ್ಲ ಕಾರ್ಯಾಡಿ (ದುಬೈ), ಇರ್ದೆ ಪೇರಲ್ತಡ್ಕ ಅಧ್ಯಕ್ಷ ಎನ್.ಎಂ. ಮಹಮ್ಮದ್, ಕಬಕ ವಲಯಾಧ್ಯಕ್ಷ ಹಂಝ ಕಬಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement