ಕಾಂಗ್ರೆಸ್ ಅಭ್ಯರ್ಥಿ ಕಚೇರಿಗೆ ದಾಳಿ
ಕ.ಪ್ರ.ವಾರ್ತೆ ಮಂಗಳೂರು ಏ.29
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಚುನಾವಣಾ ಕಚೇರಿಗೆ ಸೋಮವಾರ ಮಧ್ಯಾಹ್ನ ಚುನಾವಣಾಧಿಕಾರಿಗಳು ದಾಳಿ ನಡೆಸಿ, ಪ್ರಚಾರ ಸಾಮಗ್ರಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಕೇಂದ್ರ ನಿಯಂತ್ರಣ ಕೊಠಡಿಯಿಂದ ಬಂದ ನಿರ್ದೇಶನದಂತೆ ದಕ್ಷಿಣ ವಿಧಾನಸಭೆ ಕ್ಷೇತ್ರ ಚುನಾವಣಾಧಿಕಾರಿ ಮಧ್ಯಾಹ್ನ 2.15ಕ್ಕೆ ದಾಳಿ ನಡೆಸಿದರು. ಒಂದು ಗಂಟೆ ಕಾಲ ತಪಾಸಣೆ ನಡೆಸಿದರು. ಮೂರು ಮಂದಿ ಸೆಕ್ಟರ್ ಅಧಿಕಾರಿಗಳು ಜತೆಗಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಅವರ ಚುನಾವಣಾ ಕಚೇರಿಗೆ ದಾಳಿ ನಡೆಸಿದ ಅಧಿಕಾರಿಗಳು, ಮುದ್ರಕರ ವಿವರ ಇಲ್ಲದ 250 ಪ್ರಚಾರದ ಕರಪತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದಾಳಿ ವೇಳೆ “ÑÚMeæ’ ಪತ್ರಿಕೆಯ 1,500 ಪ್ರತಿಗಳು ದೊರೆತಿವೆ.
1077 ಹೆಲ್ಪ್ಲೈನ್ಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆಯಂತೆ ದಾಳಿ ನಡೆದಿದೆ. ಬಿಜೆಪಿ ಅಭ್ಯರ್ಥಿ ವಿರುದ್ಧ ಆಕ್ಷೇಪಾರ್ಹ ಬರಹಗಳಿದ್ದ ಪತ್ರಿಕೆಗಳು ಕಾಂಗ್ರೆಸ್ ಕಚೇರಿಯಲ್ಲಿವೆ ಎಂಬ ದೂರು ಬಂದಿತ್ತು. ಏ.17ರಂದು ಪ್ರಕಟವಾದ 500 ಪ್ರತಿಗಳು, ಏ.24 ಪ್ರಕಟವಾದ 1 ಸಾವಿರ ಪೇಪರ್ಗಳನ್ನು ಮುಟ್ಟುಗೋಲು ಹಾಕಿದ್ದಾರೆ. ಇದರಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಲೇಖನ ಪ್ರಕಟವಾಗಿತ್ತು.