ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ತಿಂಡಿ ನೀಡದೆ ಚುನಾವಣೆ ತರಬೇತಿ: ಪ್ರತಿಭಟನೆ

Mainashree
Updated On : 30 Apr 2013, 11:56 am

ಮಂಗಳೂರು: ಚುನಾವಣೆ ತರಬೇತಿಗೆ ಬಂದ ಶಿಕ್ಷಕರಿಗೆ ಬೆಳಗ್ಗೆ ತಿಂಡಿ ನೀಡದ ಹಿನ್ನೆಲೆಯಲ್ಲಿ ಅವರು ಪ್ರತಿಭಟನೆ ನಡೆಸಿದರು. ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆ ಕರ್ತವ್ಯ ನಿರ್ವಹಿಸಬೇಕಿದ್ದ ಶಿಕ್ಷಕರಿಗೆ ಕುದ್ರೋಳಿ ಗೋಕರ್ಣನಾಥೇಶ್ವರ ಕಾಲೇಜಲ್ಲಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.   ಸುಳ್ಯ, ಪುತ್ತೂರಿನ ದೂರದೂರುಗಳಿಂದ ಬೆಳಗ್ಗೆ 9 ಗಂಟೆಗೆ ಆಗಮಿಸಿದ್ದ ಶಿಕ್ಷಕರು, ಮಂಗಳೂರಿಗೆ 9 ಗಂಟೆಗೆ ತಲುಪಿ ಅಲ್ಲಿಂದ ಬೆಳಗ್ಗಿನ ಜಾವ 6.30ರಿಂದ ಹೊರಡಬೇಕಾಗುತ್ತದೆ. ಮಧ್ಯೆ ತಿಂಡಿ ಮಾಡೋಣ ಎಂದು ಹೇಳಿದರೆ ಮಂಗಳೂರಲ್ಲಿಯೇ ವ್ಯವಸ್ಥೆ ಇದೆ ಎಂಬ ಭರವಸೆ ಬಂದಿತ್ತು. ಆದರೆ ಬೆಳಗ್ಗೆ ಬಿಸ್ಕತ್ ಮತ್ತು ಚಹಾ ನೀಡಿದಾಗ ಸಿಟ್ಟಿಗೆದ್ದ ಶಿಕ್ಷಕರು ಪ್ರತಿಭಟನೆ ಶುರು ಮಾಡಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement