ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಭ್ರಷ್ಟಾಚಾರದಲ್ಲಿ ಮೋದಿ ಬಿಎಸ್‌ವೈ ತಮ್ಮ

Mainashree
Updated On : 30 Apr 2013, 11:51 am

ಕ.ಪ್ರ.ವಾರ್ತೆ  ಮಂಗಳೂರು  ಏ.29
'ಭ್ರಷ್ಟಾಚಾರದಲ್ಲಿ ಯಡಿಯೂರಪ್ಪನ ತಮ್ಮನಾಗಿರುವ ನರೇಂದ್ರ ಮೋದಿ ದೇಶದ ಕಾನೂನು ಗೊತ್ತಿಲ್ಲದ ದಡ್ಡ' ಎಂದು ಎಂದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ವ್ಯಂಗ್ಯವಾಡಿದ್ದಾರೆ.
 ಸೋಮವಾರ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, 'ಭಾನುವಾರ ಬೆಂಗಳೂರಿನಲ್ಲಿ ಮೋದಿ ನಡೆಸಿದ ಭಾಷಣದಲ್ಲಿ ಕಾಂಗ್ರೆಸ್‌ಗೆ ಮುಖ್ಯಮಂತ್ರಿಯನ್ನು ಘೋಷಿಸುವ ಯೋಗ್ಯತೆ ಇಲ್ಲ' ಎಂದಿದ್ದಾರೆ. ಕಾನೂನಿನ ಪ್ರಕಾರ ಈ ದೇಶದ ಪ್ರಧಾನಿ ಹಾಗೂ ಮುಖ್ಯಮಂತ್ರಿಯನ್ನು ಚುನಾವಣೆಗೆ ಮೊದಲು ಘೋಷಿಸುವುದಿಲ್ಲ. ಅವರನ್ನು ಆಯ್ಕೆ ಮಾಡುವುದು ಜನತೆಯಲ್ಲ, ಬದಲಾಗಿ ಜನರಿಂದ ಆಯ್ಕೆಯಾದ ಶಾಸಕರು ಎಂಬ ಪರಿಜ್ಞಾನವೂ ಮೋದಿ ಹಾಗೂ ಸುಪ್ರೀಂ ಕೋರ್ಟಿನ ನ್ಯಾಯವಾದಿಯಾಗಿರುವ ಅರುಣ್ ಜೇಟ್ಲಿಗೂ ಇಲ್ಲ' ಎಂದು ದೂರಿದರು.
 ಸಿಎಜಿ ವರದಿ ಪ್ರಕಾರ ನರೇಂದ್ರ ಮೋದಿಯವರು ಗುಜರಾತ್ ಸರ್ಕಾರ ಮತ್ತು ಜನರಿಗೆ 548 ಕೋಟಿ ನಷ್ಟ ಮಾಡಿದ್ದಾರೆ. ರಿಲಯನ್ಸ್ ಕಂಪನಿಯಿಂದ ದೊಡ್ಡ ದೊಡ್ಡ ಕಂಪನಿ ತೆರೆಯಲು ಗುಜರಾತಿನಲ್ಲಿ ಅವಕಾಶ ಕಲ್ಪಿಸಿ ಅನಿಲ ಸಾಗಾಟ ವೆಚ್ಚದಲ್ಲಿ ರಿಯಾಯಿತಿ ನೀಡಿ 52.27 ಕೋಟಿ ನಷ್ಟ ಉಂಟುಮಾಡಿದ್ದು, ಕಂಪನಿಯಿಂದ ಇನ್ನೂ ವಸೂಲಿ ಮಾಡಿಲ್ಲ. ಅದನಿ ಪ್ರೈವೇಟ್ ಲಿಮಿಟೆಡ್(ಎಪಿಐ) ಕಂಪನಿಗೆ 160.26 ಕೋಟಿ ಮನ್ನಾ ಮಾಡಿದ್ದಾರೆ. ಸೂರತ್‌ನಲ್ಲಿ ಎಸ್ಸಾರ್ ಸ್ಟೀಲ್ ಕಂಪನಿಗೆ 7,24,897 ಚದರ ಮೀಟರ್ ಜಾಗವನ್ನು ಕೊಟ್ಟ ಪರಿಣಾಮ ಸರ್ಕಾರಕ್ಕೆ 128.71 ಕೋಟಿ ನಷ್ಟ, ಎಲ್ ಅ್ಯಂಡ್ ಟಿ ಕಂಪನಿಗೆ ಭೂಮಿಯನ್ನು ಚಿಕ್ಕಾಸಿಗೆ ನೀಡಿರುವುದರಿಂದ ಸರ್ಕಾರಕ್ಕೆ ರು. 128.71 ಕೋಟಿ ನಷ್ಟವಾಗಿದೆ ಎಂದರು.
 'ನವದಿಲ್ಲಿಯಲ್ಲಿ ಸುರಕ್ಷತೆ ಇಲ್ಲ' ಎಂದಿರುವ ಮೋದಿಗೆ, ಎನ್‌ಡಿಎ ಸರ್ಕಾರ ಇದ್ದಾಗ ಉಪಪ್ರಧಾನಿ ಹಾಗೂ ಗೃಹ ಸಚಿವರಾಗದಿದ್ದ ಎಲ್.ಕೆ. ಆಡ್ವಾಣಿ ಸಂಸತ್ತಿಗೆ ಬರುವಾಗ ಅವರ ಬೆಂಗಾವಲು ಪಡೆಯ ಹಿಂದೆಯೇ ಉಗ್ರರು ಸಂಸತ್ ದಾಳಿ ನಡೆಸಿದ್ದು ಮರೆತು ಹೋಯಿತೇ? ಕೆಂಪು ಕೋಟೆಯೊಳಗೆ ಸೈನಿಕರನ್ನು ಉಗ್ರರು ಕೊಂದಾಗ ರಕ್ಷಣೆ ಇತ್ತೇ? ಗುಜಾರಾತಿನಲ್ಲಿ ದೇವಸ್ಥಾನವೊಂದಕ್ಕೆ ಉಗ್ರರು ದಾಳಿ ಮಾಡಿದಾಗ ಮೋದಿ ಎಲ್ಲಿದ್ದರು? ಎಂದು ಪೂಜಾರಿ ಪ್ರಶ್ನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement