ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

126 ಗ್ರಾಂ ಚಿನ್ನಾಭರಣ, 5.8 ಲಕ್ಷ ನಗದು ಕಳವು

Vishwanath S
Updated On : 1 May 2013, 11:30 am

ಮಂಗಳೂರು: ಕುತ್ತಾರು ಬಳಿ ಸೋಮವಾರ ರಾತ್ರಿ ಎರಡು ಮನೆಗಳಿಗೆ ನುಗ್ಗಿದ ಕಳ್ಳರು 5.8 ಲಕ್ಷ ನಗದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.  
ಕುತ್ತಾರು ಲೋಬೊ ಕಂಪೌಂಡ್ ನಿವಾಸಿ ಡೊನಾಲ್ಡ್ ಲೋಬೊ ಮನೆಯ ಹಿಂಬಾಗಿಲು ಮುರಿದ ಕಳ್ಳರು ಕಪಾಟಿನಲ್ಲಿ ಇರಿಸಿದ್ದ 5.5 ಲಕ್ಷ ನಗದು, 70 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ. ಲೋಬೊ ಮಂಗಳೂರಿನ ಸಂಬಂಧಿಕರ ಮನೆಗೆ ತೆರಳಿದ್ದರು. ಪಕ್ಕದ ಮನೆಯವರು ಸದ್ದು ಕೇಳಿ ಲೋಬೊಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಆದರೆ ಮನೆ ಯಜಮಾನ ಬರುವಷ್ಟರಲ್ಲಿ ಕಳ್ಳರು ಸೊತ್ತು ಸಮೇತ ಕಾಲ್ಕಿತ್ತಿದ್ದರು. ಕುತ್ತಾರು ರಾಜೇಶ್ ನಾಯರ್ ಎಂಬವರ ಮನೆಗೆ ನುಗ್ಗಿದ ಕಳ್ಳರು 30 ಸಾವಿರ ನಗದು ಮತ್ತು 56 ಗ್ರಾಂ ಚಿನ್ನಾಭರಣ ದೋಚಿದ್ದಾರೆ.
ನಾಲ್ಕು ಪವನ್‌ನ ಕರಿಮಣಿ ಸರ ಕಳವು
ಉಪ್ಪಿನಂಗಡಿ: ಉಪ್ಪಿನಂಗಡಿಯಿಂದ ಪುತ್ತೂರಿಗೆ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣೀಕರ ನಾಲ್ಕು ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಸರಗಳ್ಳರು ಎಗರಿಸಿದ್ದಾರೆ. ಕೊಂಬಾರು ನಿವಾಸಿ ಮೋಹಿನಿ ಆಸ್ಪತ್ರೆಗೆಂದು ಪುತ್ತೂರಿಗೆ ಬಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರ ಕುತ್ತಿಗೆಯಲ್ಲಿದ್ದ ನಾಲ್ಕು ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಯಾರೋ ಕಳ್ಳರು ಎಳೆದೊಯ್ದಿದ್ದಾರೆಂದೂ ಮೋಹಿನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement