ಟ್ಯಾಂಕರ್ ಡಿಕ್ಕಿ: ಬೈಕ್ ಸವಾರ ಬಲಿ, ಇನ್ನೊಬ್ಬ ಗಂಭೀರ
ಮಂಗಳೂರು: ಸುರತ್ಕಲ್ ಮುಕ್ಕ ಬಳಿ ಟ್ಯಾಂಕರ್ ಡಿಕ್ಕಿಯಾಗಿ ಬೈಕ್ ಸವಾರ ಬಿಬಿಎ ವಿದ್ಯಾರ್ಥಿ ಮೃತಪಟ್ಟಿದ್ದು, ಸಹ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಭಟ್ಕಳ ಅಂಜುಮನ್ ಮ್ಯಾನೇಜ್ಮೆಂಟ್ ಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಯ ಬಿಬಿಎ ವಿದ್ಯಾರ್ಥಿ, ಸುಲ್ತಾನ್ರಸ್ತೆ ನಿವಾಸಿ ಮೊಯಿನ್ ಮೊಹ್ತಿಶಾಂ ಎಂಬವರ ಮಗ ಅಮಾಶ್ ಮೊಹ್ತಿಶಾಂ (21) ಮೃತಪಟ್ಟವರು.
ತನ್ನ ಗೆಳೆಯ ಮೊಹಮ್ಮದ್ ಅವೊನ್ ಜತೆ ಬೈಕ್ನಲ್ಲಿ ಭಟ್ಕಳದಿಂದ ಮಂಗಳೂರಿಗೆ ಆಗಮಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಅವೊನ್ನನ್ನು ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರತ್ಕಲ್ ಪೊಲೀಸರು ಟ್ಯಾಂಕರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.