ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಗ್ರಾಪಂ ಉಪಚುನಾವಣೆ; ಅಭ್ಯರ್ಥಿ ಹರೀಶ್ ವಿರುದ್ಧ ದೂರು

Lingaraj Badiger
Updated On : 2 Aug 2013, 11:09 am

ಮೂಲ್ಕಿ: ಇಲ್ಲಿನ ಮೆನ್ನಬೆಟ್ಟು ಗ್ರಾಪಂನ ಒಂದು ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಕರಪತ್ರ ವಿವಾದ ಉಂಟಾಗಿದ್ದು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಮೆನ್ನಬೆಟ್ಟು ಗ್ರಾಪಂನ ಸದಸ್ಯರೊಬ್ಬರು ಸತತ ಗೈರು ಹಾಜರಿಯಿಂದಾಗಿ ತೆರವಾದ ಪರಿಶಿಷ್ಟ ವರ್ಗದ ಸದಸ್ಯತ್ವಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಹರೀಶ್ ಕೆ. ಅವರು ತಮ್ಮ ಚುನಾವಣೆ ಪ್ರಚಾರದ ಕರಪತ್ರದಲ್ಲಿ ಸಚಿವ ಕೆ. ಅಭಯಚಂದ್ರ ಜೈನ್ ಹಾಗೂ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಸಾಲ್ಯಾನ್ ಅವರ ಭಾವಚಿತ್ರ ಹಾಕಿದ್ದಾರೆ.
ಜತೆಗೆ ಪ್ರಕಟಣೆ ವಸಂತ ಬೆರ್ನಾಡ್, ಪ್ರಧಾನ ಕಾರ್ಯದರ್ಶಿ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಎಂದು ನಮೂದಿಸಿದ್ದು ಈ ಬಗ್ಗೆ ಪಂಚಾಯತ್ ಸದಸ್ಯರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಚುನಾವಣಾಧಿಕಾರಿ ಗಣೇಶ ಬಡಿಗೇರ್ ಅವರಿಗೆ ದೂರು ಸಲ್ಲಿಸಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಯಾವುದೇ ಪಕ್ಷದ ಚಿನ್ಹೆ, ಪಕ್ಷದ ನಾಯಕರ ಭಾವಚಿತ್ರ ಹಾಗೂ ಹುದ್ದೆಗಳನ್ನು ನಮೂದಿಸುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಪಂ ಅಧ್ಯಕ್ಷ ಜನಾರ್ದನ ಬಂಗೇರ ಚುನಾವಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement