ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಂಚಾರಿ ಎಸ್‌ಐ ವಿರುದ್ಧ ಹಲ್ಲೆ ಪ್ರಕರಣ

Lingaraj Badiger
Updated On : 2 Aug 2013, 11:15 am

ಮಂಗಳೂರು: ಕರ್ತವ್ಯ ನಿರತ ಸಂಚಾರಿ ಎಸ್‌ಐ ವಿರುದ್ಧ ಲಾರಿ ಚಾಲಕ ಹಲ್ಲೆ ಪ್ರಕರಣಕ್ಕೆ ತಿರುವು ಬಂದಿದೆ. ಹಲ್ಲೆ ನಡೆಸಿದ ಆರೋಪಿ ಕಿರಣ್ ಜಾನ್ಸನ್ ಪಿರೇರಾ ಸಂಚಾರಿ ಸಬ್‌ಇನ್‌ಸ್ಪೆಕ್ಟರ್ ಮಲ್ಲಪ್ಪ ಡಿ. ಮಡ್ಡಿ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ
ಆವರು ಹೇಳುವಂತೆ ಜು.29ರಂದು ಬೆಳಗ್ಗೆ 9 ಗಂಟೆಗೆ ಹಂಪನಕಟ್ಟೆ ವೃತ್ತದಲ್ಲಿ ಲಾರಿ ಚಲಾಯಿಸಿ ಬರುತ್ತಿರುವಾಗ ಕರ್ತವ್ಯದಲ್ಲಿ ಮಹಿಳಾ ಎಎಸ್‌ಐ ನಿಲ್ಲಿಸಲು ಸೂಚನೆ ನೀಡಿದ್ದು ಗೊತ್ತಾಗಿಲ್ಲ.  ಮುಂದಕ್ಕೆ ತಾಲೂಕು ಕಚೇರಿ ಸಮೀಪ ಬರುತ್ತಿರುವಾಗ ಎಸ್‌ಐ ಮಲ್ಲಪ್ಪ ಡಿ.ಮಡ್ಡಿ ಅವರು ಲಾರಿ ನಿಲ್ಲಿಸಲು ಸೂಚಿಸಿದರು. ಲಾರಿಯಿಂದ ಇಳಿಯುವಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ದಾಖಲೆ ಕೇಳಿದರು, ಹೊಸ ಲಾರಿ ಆಗಿರುವ ಕಾರಣ ದಾಖಲೆಗಳು ಆರ್‌ಟಿಒ ಕಚೇರಿಯಲ್ಲಿದೆ ಹೇಳಿದಾಗ ಕೈಯಿಂದ ಹೊಡೆದು ಕಾಲಿನಿಂದ ದೂಡಿ ಹಲ್ಲೆ ನಡೆಸಿದ್ದಾರೆ ಎಂದು ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಪಾಂಡೇಶ್ವರ ಪೊಲೀಸರು ಎಸ್‌ಐ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement