ಚಿಕಿತ್ಸೆಗೆ ಧನಸಹಾಯ ಕೋರಿಕೆ
ಉಪ್ಪಿನಂಗಡಿ: ಮೂಲತಃ ಬೆಳ್ತಂಗಡಿಯ ಲಾಯಿಲ ಗ್ರಾಮದ ಕವಟೆ ಮನೆ ನಿವಾಸಿ ಬೆಂಜಮಿನ್ ಪ್ರಕಾಶ್ ಪಿಂಟೋ ಎಂಬವರು ಮಾರಣಾಂತಿಕ ಸ್ಥಿತಿಯಲ್ಲಿದ್ದು, ಚಿಕಿತ್ಸೆಗೆ ಧನಮೂಲವಿಲ್ಲದೆ ನೆರವು ಕೋರಿದ್ದಾರೆ. ಒಡಹುಟ್ಟಿದವರಿಂದ ಬೇರ್ಪಟ್ಟಿರುವ ಅವರು ಇದೀಗ ಕೊಕ್ಕಡದ ಸ್ನೇಹಿತರ ಆಶ್ರಯದಲ್ಲಿದ್ದಾರೆ. ಅವರ ಚಿಕಿತ್ಸೆಗೆ ಸ್ನೇಹಿತರು ಲಕ್ಷಾಂತರ ರು. ವೆಚ್ಚ ಮಾಡಿಯೂ ಅವರನ್ನು ಸಂಪೂರ್ಣ ಗುಣಮುಖರನ್ನಾಗಿಸಲು ಸಾಧ್ಯವಾಗದೆ ಹೆಚ್ಚಿನ ಚಿಕಿತ್ಸೆಗೆ ಧನಸಹಾಯ ಬಯಸಿದ್ದಾರೆ. ಮೂರು ತಿಂಗಳ ಹಿಂದೆ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಮೂತ್ರ ಸಂಬಂಧಿ ಕಾಯಿಲೆಯೆಲ್ಲ ಒಮ್ಮೆಗೇ ಉಲ್ಬಣಿಸಲ್ಪಟ್ಟು ನಡೆಯಲಾಗದ ಸ್ಥಿತಿ ತಲುಪಿದರು. ಈ ಸಂದರ್ಭ ಸ್ನೇಹಿತರಾದ ಕೊಕ್ಕಡ ಗ್ರಾ.ಪಂ ಸದಸ್ಯ ಲಕ್ಮೀನಾರಾಯಣ, ಪತ್ರಕರ್ತ ಗುರುಮೂರ್ತಿ, ಸುಬ್ರಹ್ಮಣ್ಯ ಶಗ್ರಿತ್ತಾಯ ಸೇರಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಹಾಯ ಮಾಡಲು ಇಚ್ಛಿಸುವವರು ಕೊಕ್ಕಡ ಸಿಂಡಿಕೇಟ್ ಬ್ಯಾಂಕ್ನ ಖಾತೆ ಸಂಖ್ಯೆ -01682210041854 (ಪ್ರಕಾಶ್ ಪಿಂಟೊ)ಗೆ ಹಣ ಜಮಾ ಮಾಡಬಹುದು. ಸಂಪರ್ಕ ಸಂಖ್ಯೆ- 9844909809.