ನಾಳೆ ಪುಸ್ತಕ, ಡಿವಿಡಿ ಲೋಕಾರ್ಪಣೆ
ಮಂಗಳೂರು: ಹವ್ಯಕ ಭಾಷೆಯ ಉಳಿವು- ಬೆಳೆವಿಗಾಗಿ ದುಡಿಯುತ್ತಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಹೊಸ ಎರಡು ಪ್ರಕಟಣೆಗಳು ಬಿಡುಗಡೆಗೆ ಸಿದ್ಧವಾಗಿವೆ.
'ಅಟ್ಟಿನಳಗೆ- ಇದು ಅಡಿಗೆ ಪುಸ್ತಕ ಅಲ್ಲ' (19 ಲೇಖಕರ ವೈವಿಧ್ಯಮಯ ಬರಹಗಳ ಸಂಗ್ರಹ) ಪುಸ್ತಕ ಹಾಗೂ 'ಅಷ್ಟಾವಧಾನ' ಡಿವಿಡಿ (ಡಾ.ಆರ್. ಗಣೇಶ್ ಅವರ ಸಾರಥ್ಯದಲ್ಲಿ ಪ್ರತಿಷ್ಠಾನದ ವತಿಯಿಂದ ಪುತ್ತೂರಿನಲ್ಲಿ ನಡೆದ ಅಷ್ಟಾವಧಾನ ಕಾರ್ಯಕ್ರಮದ ಡಿವಿಡಿ) ಯನ್ನು ಭಾನುವಾರ ಪೂರ್ವಾಹ್ನ 11.30ರ ನಂತರ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಶಾಖಾಮಠದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಪ್ರತಿಷ್ಠಾನ ಪ್ರಕಟಣೆ ತಿಳಿಸಿದೆ.