ಸರ್ವ ಕಾಲೇಜು ಸಂಘ ಅಧ್ಯಕ್ಷ ರೂಪೇಶ್ ರೈ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಗೋವಿಂದಾಸ್ ಕಾಲೇಜಿನ ರೂಪೇಶ್ ಎಲ್.ಆರ್. ರೈ ಆಯ್ಕೆಯಾಗಿದ್ದಾರೆ. 2013-14ನೇ ಸಾಲಿನ ಚುನಾವಣೆಯು ಮಾಜಿ ಸಿಂಡಿಕೇಟ್ ಸದಸ್ಯ ಚುನಾವಣಾಧಿಕಾರಿ ಐವನ್ ಡಿಸೋಜ ಅವರ ನೇತೃತ್ವದಲ್ಲಿ ನಗರದ ವುಡ್ಲ್ಯಾಂಡ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ದ.ಕ., ಉಡುಪಿ, ಕೊಡಗು ಜಿಲ್ಲೆಯ ಸುಮಾರು 85 ವಿದ್ಯಾರ್ಥಿ ಸಂಘದ ಚುನಾಯಿತ ಪ್ರತಿನಿಧಿಗಳು ಮತ್ತು ಕಾಲೇಜಿನ ಪ್ರಮುಖ ವಿಭಾಗಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದು, 55 ನಾಮಪತ್ರ ಸಲ್ಲಿಕೆಯಾಗಿತ್ತು. ಉಪಾಧ್ಯಕ್ಷರಾಗಿ ಬ್ಲ್ಯಾನಿ ಡಿಸೋಜ, ಎಂ.ಡಿ. ಮೊಹಮ್ಮದ್ ಫರಾಜ್, ಸಂದೇಶ್ ಲೋಬೋ, ವಿನ್ಸ್ಟೆನ್ ಲೆವಿನ್ ಸಿಕ್ವೇರಾ, ಎಂ.ಡಿ. ಇರ್ಫಾನ್, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್, ಅಲೋಕ್.ಬಿ, ತರುಷ್ ಜೆ. ಹೆರಾಜೆ, ಮೊಹಮ್ಮದ್ ಷೆಹಜಾನ್, ಶಬರೀಶ್ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ಮನೋಹರ್ ಶೆಟ್ಟಿ, ಹರ್ಷ ಪವರ್, ಲಕ್ಷ್ಮೀಶ್ ಭಟ್, ಮೊಹಮ್ಮದ್ ರಿಜ್ವಾನ್, ಸುಪ್ರಿತಾ ಕೆ.ಜಿ., ಕ್ರೀಡಾ ಕಾರ್ಯದರ್ಶಿ ಪ್ರೀತಮ್ ಡಿಸೋಜ ಮತ್ತು ಕಾರ್ಯಕಾರಿ ಸಮಿತಿಯಲ್ಲಿ 15 ಮಂದಿ ಸದಸ್ಯರನ್ನು ನೇಮಕ ಮಾಡಲಾಯಿತು.